ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು

ರಾಯಚೂರು.ಜ.೧೧- ಕಟ್ಟಡ ನಿರ್ಮಾಣ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕಟ್ಟಡ ಕಾರ್ಮಿಕ ಮೃತಪಟ್ಟುವ ಮತ್ತೋರ್ವ ಗಾಯಗೊಂಡ ಘಟನೆ ಐಡಿಎಸ್‌ಎಂಟಿ ಲೇಔಟ್ ನಲ್ಲಿ ನಡೆದಿದೆ.
ರಾಯಚೂರು ನಗರದ ಐಡಿಎಸ್‌ಎಂಟಿ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಕಟ್ಟಡಕ್ಕೆ ಮೇಲ್ಛಾವಣಿ (ಛತ್ತು) ಸ್ಲಾಬ್ ಹಾಕುವ ವೇಳೆ, ಮುಖ್ಯ ರಸ್ತೆಯಲ್ಲೇ ಹಾದು ಹೋದ ಕರೆಂಟ್ ಮೇನ್ ಲೈನ್ ಗೆ ತಾಕಿ ಶಾಕ್ ಹೊಡೆದಿದೆ. ಹೈ ವೋಲ್ಟೇಜ್ ಇರುವ ಹಿನ್ನಲೆ, ಹನುಮೇಶ್(೨೩) ಎನ್ನುವ ಕಾರ್ಮಿಕ ಮೃತಪಟ್ಟಿದ್ದಾನೆ. ಇನ್ನೋರ್ವ ಕಾರ್ಮಿಕ ರಾಮ್ ಮೆಲಿಂದ ಕೆಳಗೆ ಬಿದ್ದು ಗಂಭೀರ ಗಾಯಾಗಿದ್ದು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಹನುಮೇಶ್ ತೆಲಂಗಾಣದ ಯರಸನದೊಡ್ಡಿ ಗ್ರಾಮದ ನಿವಾಸಿಯಾಗಿದ್ದು, ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ, ಗಾಯಾಳು ರಾಮ್ ರಾಯಚೂರು ತಾಲ್ಲೂಕಿನ ಜಿಲಮಗೇರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಘಟನೆಯು ಸದರ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.