ವಿದ್ಯುತ್​ ತಂತಿ ತುಳಿದು ಇಬ್ಬರು ರೈತರು ಸಾವು

ಬೆಳಗಾವಿ, ಜು.16- ವಿದ್ಯುತ್​ ತಂತಿ ತುಳಿದು ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಸವದತ್ತಿ ತಾಲೂಕಿನ ಹಿರೂರ ಗ್ರಾಮದಲ್ಲಿ ನಡೆದಿದೆ.
ಹಿರೂರ ಗ್ರಾಮದ ಫಕೀರಪ್ಪ ಚಂದರಗಿ(54), ಮಹಾದೇವ ಮೇತ್ರಿ(40) ಮೃತ ದುರ್ದೈವಿಗಳಾಗಿದ್ದಾರೆ.
ಫಕೀರಪ್ಪ ಚಂದರಗಿ ಹಾಗೂ ಮಹಾದೇವ ಮೇತ್ರಿ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗೊತ್ತಾಗದೇ ತುಂಡಾದ ವಿದ್ಯುತ್ ತಂತಿ ತುಳಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.