ವಿದ್ಯುತ್ ತಂತಿ ತಗುಲಿ ಇಬ್ಬರು ರೈತರ ಸಾವು

ಮುನವಳ್ಳಿ,ಜು.17: ಸಮಿಪದ ಹಿರೂರ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಷಿಸಿ ಇಬ್ಬರು ರೈತರು ಶನಿವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೊಟದ ಮಾಲಕ ಫಕೀರಪ್ಪಾ ಸಿದ್ದಪ್ಪಾ ಚಂದರಗಿ (54), ಹಾಗೂ ಕೆಲಸಗಾರ ರೈತ ಮಹಾದೇವ ದುರ್ಗಪ್ಪಾ ಮೇತ್ರಿ (40) ಮೃತಪಟ್ಟವರು. ಸ್ಥಳಕ್ಕೆ ಮುನವಳ್ಳಿ ಠಾಣೆ ಪೊಲೀಸರು ಹಾಗೂ ರಾಮದುರ್ಗದ ಡಿ.ವಾಯ.ಎಸ್.ಪಿ, ಸವದತ್ತಿಯ ತಸಿಲ್ದಾರ, ಸಿ.ಪಿ.ಐ, ಪಿ.ಎಸ್.ಐ ತೆರಳಿ ವಿಚಾರಣೆ ನಡೆಸಿದ್ದು ಮುಂದಿನ ಕ್ರಮ ಕೈಕೊಂಡಿದ್ದಾರೆ.