ವಿದ್ಯುತ್ ಟಿಸಿ ಪಕ್ಕದಲ್ಲಿಯೇ ಸಿಮೆಂಟ್ ಲಾರಿ ನಿಲುಗಡೆ

ಸೇಡಂ,ಎ,03: ತಾಲೂಕಿನ ಮಳಖೇಡ ಗ್ರಾಮದ ನಿಜಲಿಂಗಪ್ಪ ನಗರಕ್ಕೆ ತೆರಳುವ ಮುಂಭಾಗ ಹಾಗೂ ಪೆÇಲೀಸ್ ಸ್ಟೇಷನ್ ಎದುರುಗಡೆ ಇರುವ ವಿದ್ಯುತ್ ಟಿಸಿ ಬಳಿ ಸಿಮೆಂಟ್ ಲಾರಿಗಳ ನಿಲುಗಡೆ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ.
ಅಪಾಯಕಾರಿ ವಿದ್ಯುತ ಟಿಸಿ ಹತ್ತಿರ ಲಾರಿಗಳ ಪಾರ್ಕಿಂಗ್ ಮಾಡುತ್ತಿರುವುದು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಹಾಗೂ ಸಂಬಂಧಪಟ್ಟ ಇಲಾಖೆಯವರು ಟಿಸಿಯ ಸುತ್ತಮುತ್ತ ಸುರಕ್ಷತಾ ತಂತಿಬೇಲಿಯನ್ನಾದರೂ ಅಳವಡಿಸುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ಎಂದು ನಿಜಲಿಂಗಪ್ಪ ನಗರದ ನಿವಾಸಿಗಳು ಹಾಗೂ ವಿದ್ಯಾರ್ಥಿ ಸಂಘಟನೆಯವರು ಒತ್ತಾಯಿಸುತ್ತಿದ್ದಾರೆ.