ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದ ಅಬ್ದುಲ್ ಸಾಹೇಬ್,ವರ್ಗಾವಣೆಗೆ ಆಗ್ರಹ

ರಾಯಚೂರು,ಜು.೨೦- ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಜೆಸ್ಕಾಂ ಕಿರಿಯ ಇಂಜಿನಿಯರ್ ಅಧಿಕಾರಿ ಅಬ್ದುಲ್ ಸಾಹೇಬ್ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಹೈದ್ರಾಬಾದ್ ಕರ್ನಾಟಕ ವಿದ್ಯುತ್ ಗ್ರಾಹಕರ ಸಂಘದ ಅಧ್ಯಕ್ಷ ಶರತ್ ಕುಮಾರ ಕಳಸ ಒತ್ತಾಯಿಸಿದರು.
ವಿದ್ಯುತ್ ಗ್ರಾಹಕರು ಸಮಸ್ಯೆಗಳ ಬಗ್ಗೆ ಗ್ರಾಹಕರ ಕುಂದುಕೊರತೆ ನಿವಾರಣೆ ವೇದಿಕೆ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಸ್ಪಂದಿಸುತ್ತಿಲ್ಲ.ಮಹಮದ್ ಹುಸೇನ್ ಅವರ ಸಮಸ್ಯೆ ಬಗ್ಗೆ ಅಧಿಕಾರಿ ಗಮನಕ್ಕೆ ತಂದಿದ್ದಾರೆ ಕಿರಿಯ ಇಂಜಿನಿಯರ್ ಅಬ್ದುಲ್ ಸಾಹೇಬ ಅವರು ಏರುದ್ವನಿಯಲ್ಲಿ ಚಿರಾಡಿ ಕೆಟ್ಟ ಪದಗಳಿಂದ ನೀಡಿದ್ದಾರೆ ಎಂದು ಆರೋಪಿಸಿದರು.
ಗ್ರಾಹಕರ ಕುಂದುಕೊರತೆ ನಿವಾರಣೆ ವೇದಿಕೆ ಒಂದು ಅರೆ ನ್ಯಾಯಿಕ ಪ್ರಕ್ರಿಯೆ ಎನ್ನುವುದು ಮರೆತು,ವೇದಿಕೆಗೆ ಹಾಗೂ ಶಿಸ್ತು ಪ್ರಾಧಿಕಾರಿಯಾದ ಅಧೀಕ್ಷಕ ಇಂಜಿನೀಯರ್ ಅವರಿಗೆ ವೇದಿಕೆಯ ಇತರ ಸದಸ್ಯರಿಗೆ ಅವಮಾನ ಮಾಡಿದ್ದಾರೆ.ಅಬ್ದುಲ್ ಸಾಹೇಬ ಇವರಿಗೆ ಯಾವುದೇ ತಾಂತ್ರಿಕ ಜ್ಞಾನದ ತರಬೇತಿ ಇಲ್ಲ ಹಾಗೂ ಯಾವುದೇ ತಾಂತ್ರಿಕ ವಿದ್ಯಾರ್ಹತೆ ಇಲ್ಲ ಕೆ.ಇ.ಆರ್.ಸಿ ಸಿ.ಓಎಸ್ -೨೦೦೬ ಪ್ರಕಾರ ಅರ್ಹ ಇಂಜಿನೀಯರ್ ಮಾತ್ರ ಮೀಟರ್ ತಪಾಸಣೆ ಮಾಡಬೇಕು ಆದರೆ ಅಬ್ದುಲ್ ಸಾಹೇಬ ಇವರು ಮೀಟರ್ ತಪಾಸಣೆ ಮಾಡಲು ಅನರ್ಹರು ಎಂದು ದೂರಿದರು.
ಅಬ್ದುಲ್ ಸಾಹೇಬ ಇವರು ಗ್ರಾಮೀಣ ವಿಭಾಗದ ಕಿ ಇಂ.ಆಗಿದ್ದು ಕೇವಲ ಸಿಂಗಲ್ ಫೇಸ್ ಮೀಟರ್ ಮಾತ್ರ ತಪಾಸಣೆ ಮಾಡಬೇಕು.ಸಹಾಯಕ ಇಂಜಿ ನೀಯರ್ ಪ್ರಭಾರಿಯಾದರೆ ಮಾತ್ರ ಥ್ರೀಫೇಸ್ ಮೀಟರ್ ತಪಾಸಣೆ ಮಾಡಬಹುದು.ಆದರೆ ಇವರು ಗ್ರಾಮೀಣ ವಿಭಾಗದ ಪ್ರಭಾರಿ ಸಹಾಯಕ ಇಂಜಿ ನೀಯರ್ ಅಲ್ಲದಿದ್ದರೂ ಥ್ರೀಫೇಸ್ ಮೀಟರ್ ಗಳನ್ನು ನಿಯಮ ಉಲ್ಲಂಘಸಿ ತಪಾಸಣೆ ಮಾಡುತ್ತಿದ್ದಾರೆ ಕೂಡಲೇ ಇವರ ಮೇಲೆ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಮಹಿಬುಬ್, ಟಿ.ಶಿವುಕುಮಾರ,ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.