
ಭಾಲ್ಕಿ:ಆ.3:ದೊಡ್ಡ ಗುತ್ತಿಗೆ ರದ್ದು ಪಡಿಸುವುದು ಸೇರಿ ಸುಮಾರು 14 ಬೇಡಿಕೆ ಈಡೇರಿಸುವಂತೆ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ಗುತ್ತಿಗೆದಾರರ ಸಂಘ ಮಂಗಳವಾರ ಎಇಇ ಮೂಲಕ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ವಿದ್ಯುತ್ ಕಂಪನಿಗಳ ಹಿರಿಯ ಅಧಿಕಾರಿಗಳು ವಿದ್ಯುತ್ ಕಾಮಗಾರಿಗಳನ್ನು ದೊಡ್ಡ,ದೊಡ್ಡ ಏಜೆನ್ಸಿಗಳಿಗೆ ನೀಡುವ ಮೂಲಕ ಇಲ್ಲಿನ ಸ್ಥಳೀಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ.
5 ಲಕ್ಷದವರೆಗೆ ತುಂಡು ಗುತ್ತಿಗೆ ನೀಡಬೇಕು. ಪೂರ್ಣಗೊಂಡ ಎಲ್ಲ ಕಾಮಗಾರಿಗಳ ಬಿಲ್ ಶೀಘ್ರ ಪಾವತಿಸಬೇಕು. ಮೀಟರ್ ಔಟಲೆಟ್‍ಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಮಾಪಕಗಳು ದೊರೆಯದ ಕಾರಣ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರಿಗೆ ತುಂಬಾ ತೊಂದರೆಯಾಗಿದೆ.
ಕಾರಣ ವಿದ್ಯುತ್ ಮಾಪಕಗಳನ್ನು ಸರಿಯಾದ ಸಮಯಕ್ಕೆ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮುರಳಿ ಪೆÇದ್ದಾರ್, ಪ್ರಮುಖರಾದ ಶೈಲೇಶ ಚಳಕಾಪೂರೆ, ರಾಹೀಲ್ ಪಾಶಾ, ದತ್ತು ಪಾಟೀಲ್, ರಾಜು ರಾಠೋಡ್, ಸಿದ್ದು, ವಿಲಾಸ ರಾಠೋಡ್, ಸೋಮನಾಥ ಟೋಕರೆ, ಶರಣಕುಮಾರ ಭೋರಾಳೆ, ಪ್ರಕಾಶ್, ವಿಜಯಕುಮಾರ ಕಣಜಿ ಸೇರಿದಂತೆ ಹಲವರು ಇದ್ದರು.