ವಿದ್ಯುತ್ ಖಾಸಗಿಕರಣ ಮಸೂದೆ ವಾಪಸ್ ಗೆ ಆಗ್ರಹಿಸಿ ರೈತರಿಂದ  ವಿಧಾನಸೌಧ ಮುತ್ತಿಗೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.09: ರೈತರ ಸಾಗುವಳಿ ಭೂಮಿಗೆ ವಿದ್ಯುತ್ ಮೀಟರ್ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಯನ್ನು ಪರಿಹರಿಸಲು ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಸಣ್ಣಕ್ಕಿ ರುದ್ರಪ್ಪ ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳುವ ಸರ್ಕಾರ ಕೇವಲ  ಉದ್ಯಮಿಗಳು, ಖಾಸಗಿ ಕಂಪನಿಗಳು ಪರವಾಗಿ ಕಾರ್ಯನಿರ್ವಹಿಸುತ್ತಿದೆ, ಕೇಂದ್ರ ಕೃಷಿ ಕಾಯ್ದೆ ವಾಪಸ್  ಪಡೆದರು  ರಾಜ್ಯ ಸರ್ಕಾರ ವಾಪಸ್ ಪಡೆಯದೆ ರೈತರನ್ನು ವಂಚಿಸುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತೀಕ್ ಮಾತನಾಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಬೆಲೆ ಏರಿಕೆ, ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿದರು ನಿರ್ಲಕ್ಷ್ಯ ಮಾಡುತ್ತಿದೆ.
ಮುಂದಿನ ಅಧಿವೇಶನದಲ್ಲಿ‌ ರೈತರ ಸಮಸ್ಯೆಗಳನ್ನು ಚೆರ್ಚಿಸಿ ಪರಿಹರಿಸಲು ಮುಂದಾಗದಿದ್ದರೆ ಉಗ್ರಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಲು ಇದೆ 12 ರಂದು ಬೆಂಗಳೂರನಲ್ಲಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಕಳೆದ ಭಾರಿ 18 ಜಿಲ್ಲೆಯಲ್ಲಿ  ಇದೀಗ 16 ಜಿಲ್ಲೆಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಬೆಳೆಹಾನಿಯಾಗಿದ್ದು ಹಳೆಯ ಪರಿಹಾರ ನೀಡಿಲ್ಲ ಇನ್ನ ಈ ಪರಿಹಾರ ನೀಡುವುದು ಕನಸಿನ ಮಾತು ಎಂದ ಅವರು ನಮ್ಮ ‌ಅಳಲನ್ನು ಕೇಳುವವರಿಲ್ಲವಾಗಿದೆ ಎಂದರು. ಇದಕ್ಕೆ ತಕ್ಕ ಪಾಠವನ್ನು ಬಿಜೆಪಿಗೆ ಕಲಿಸಲಾಗುವುದು ಎಂದರು. ರೈತರಿಗೆ ಹೈನುಗಾರಿಕೆ ನಡೆಸಲು ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಎಚ್.ಪಿ.ಮಹಾಂತೇಶ್, ಅಯ್ಯಣ್ಣ, ಕೆ.ಎಂ.ಪ್ರದೀಪ್, ಟಿ.ನಾಗರಾಜ್, ಆರ್.ಕೆ. ತಾಯಪ್ಪ, ಗಾಳೆಪ್ಪ, ಎಲ್.ನಾಗೇಶ್  ಸೇರಿದಂತೆ ಇತರರು ಪಾಲ್ಗೊಂಡಿದ್ದರು.