ವಿದ್ಯುತ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.26: ಸಂಯುಕ್ತ ಹೋರಾಟ ಕರ್ನಾಟಕದಿಂದ ವಿದ್ಯುತ್ ಕಾಯ್ದೆ 2023 ರನ್ನು ರದ್ದುಗೊಳಿಸಲು ಮತ್ತು ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಆಗ್ರಹಿಸಿ ಇಂದು  ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿ ಪ್ರತಿಭಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡುತ್ತಾ,  2021ರಲ್ಲಿ ದೆಹಲಿಯ ಗಡಿಗಳಲ್ಲಿ ನಡೆದ ರೈತರ ಹೋರಾಟವು ಇಡೀ ಜಗತ್ತಿಗೆ ಹೊಸ ಪಾಠವನ್ನು ಕಲಿಸಿದೆ, ಅದೇನೆಂದರೆ ಯಾವುದೇ ಸಮಸ್ಯೆಗಳಿಗಾಗಲಿ ಹೋರಾಟದಿಂದ ಮಾತ್ರ ಪಾರಿಹಾರ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಆ ಹೋರಾಟದಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಕಾನೂನು ಮಾಡುವುದಾಗಿ ನೀಡಿದ್ದ ವಾಗ್ದಾನವನ್ನು ಈಡೇರಿಸಿಲ್ಲ.
ಈಗ  ವಿದ್ಯುತ್ ಅನ್ನು ಖಾಸಗೀಕರಣ ಮಾಡುವ  ವಿದ್ಯುತ್ ಕಾಯ್ದೆ 2023ರನ್ನು ಜಾರಿಗೆ ತರುತ್ತಿದ್ದಾರೆ. ಒಟ್ಟಾರೆ ಇಂದು ಎಲ್ಲಾ ಪಕ್ಷಗಳು ಸಹ ಇಂದು ರೈತರ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ.  ಇಂದು ಸಾಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಹಳ್ಳಿಗಳ ಮಟ್ಟದಲ್ಲಿ ಹೋರಾಟವನ್ನು ಬೆಳೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ  ಶಿವ ಶಂಕರ್, ಸಂಗನಕಲ್ಲು ಕೃಷ್ಣ, ಗುರಳ್ಳಿ ರಾಜ, ಮಾಧವ ರೆಡ್ಡಿ ಕೋಳೂರು ಲಿಂಗಪ್ಪ, ಧನರಾಜ್, ಮರೆಣ್ಣ, ರಮೇಶ್, ಬಸವರಾಜ್ ಸೇರಿದಂತೆ ಇತರರು ಇದ್ದರು