ರಾಯಚೂರು,ಜೂ.೨೬-
ನಗರದಲ್ಲಿ ನಿರಂತರವಾಗಿ ಅಘೋಷಿತ ವಿದ್ಯುತ್ ಕಡಿತ ನಡೆದಿದೆ.ಕಡು ಬಿಸಿಲಿಗೆ ವಿದ್ಯುತ್ ಗ್ರಾಹಕರು ಮತ್ತು ವ್ಯಾಪಾರಸ್ಥರು ಹೈರಾಣಾಗಾಗಿದ್ದಾರೆ. ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಉಪಾಧ್ಯಕ್ಷರು ಮತ್ತು ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಬೇಸಿಗೆಯ ಧಗೆಯಲ್ಲಿ ಜನರಿಗೆ ತೊಂದರೆಯಾಗದಂತೆ ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದರೂ, ಸಚಿವರ ಮಾತಿಗೂ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲವೆಂದು ದೂರಿದ್ದಾರೆ.ಸ್ವಲ್ಪವೇ ಗಾಳಿ,ಮಳೆ ಹನಿ ಬಿದ್ದರೆ, ವಿದ್ಯುತ ಕಡಿತ ತಾಸುಗಟ್ಟಲೇ ಮಾಡುತ್ತಾರೆ.
ಇದರಿಂದ ನಗರದಲ್ಲಿ ಕುಡಿಯುವ ನೀರು ಪೂರೈಕೆಗೂ ವ್ಯತ್ಯಯವಾಗಿತ್ತಿದೆ.ಇಂದು ಜಿಲ್ಲೆಗೆ ಆಗಮಿಸುತ್ತಿರುವ ಇಂಧನ ಸಚಿವರು ಇತ್ತ ಗಮನಹರಿ ಸಮಸ್ಯೆಗೆ ಪರಿಹಾರ ಒದಗಿಸಲು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.