ವಿದ್ಯುತ್ ಕಂಬ ದುರಸ್ಥಿಗೊಳಿಸುವಂತೆ ಮನವಿ

ಕಲಬುರಗಿ:ಮಾ.26: ನಗರದ ವಾರ್ಡ್ ಸಂಖ್ಯೆ 48ರ ಗುಲಬ್‍ವಾಡಿ ಹಾಗೂ ತಾರಫೈಲ್ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ಜೋತು ಬೀಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ದುರಸ್ಥಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ವೇದಿಕೆಯ ವಾರ್ಡ್ ಅಧ್ಯಕ್ಷ ಸುರೇಶ ಜಿ.ಹೊಸಮನಿ ನೇತೃತ್ವದಲ್ಲಿ ಜೆಸ್ಕಾಂ ಮುಖ್ಯ ಅಭಿಯಂತರವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದರು.

ಕಂಬಗಳು ಬಾಗಿ ನಿಂತಿದ್ದು, ವೈರ್ಗಳು ಜೋತುಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಕ್ಕಳು ಆಟವಾಡುತ್ತಿರುತ್ತವೆ. ಕಂಬಗಳು ಮೇಲೆ ಬಿದ್ದರೆ ಜೀವಕ್ಕೆ ಹಾನಿಯಾಗುತ್ತದೆ. ಹೀಗಾಗಿ ಇವುಗಳನ್ನು ಕೂಡಲೇ ದುರಸ್ಥಿಗೊಳಿಸಬೇಕು ಎಂದು ಒತ್ತಾಯಿಸಿದರು.