ವಿದ್ಯುತ್ ಕಂಬದ ತಂತಿ ತೆರವುಗೊಳಿಸುವಂತೆ ಸಿಂಧನಮಡು ಗ್ರಾಮಸ್ಥರಿಂದ ಆಗ್ರಹ

ಸೇಡಂ.ಎ.30: ತಾಲೂಕಿನ ಸಿಂಧನಮಡು ಗ್ರಾಮದಲ್ಲಿ ಅಪಾಯಕಾರಿ ವಿದ್ಯುತ್ತ ಕಂಬದ ತಂತಿಗೆ ಮರದ ಕೊಂಬೆಗಳು ಜೋತು ಬಿದ್ದಿದ್ದು ಇವುಗಳನ್ನು ತೇರುವು ಗೊಳಿಸಿ ಅಪಾಯವನ್ನು ತಡೆಯುವಂತೆ ಗ್ರಾಮಸ್ಥರಾದ ಶರಣಯ್ಯ ಮಠಪತಿ,ರೇವಣಸಿದ್ಧ ಸಿಂಧೆ, ರೌಫ್, ಸೌರಭ ಕುಲಕರ್ಣಿ,ಆಗ್ರಹಿಸಿದ್ದಾರೆ.
ಗ್ರಾಮದ ಸಿದ್ದಲಿಂಗಯ್ಯ ಸ್ವಾಮಿ ಅವರ ಮನೆಯಮಾಳಿಗೆಯ ಮೇಲೆ ಆಚಾತುರಕತೆಯಿಂದ ನಾಲ್ಕು ವರ್ಷಗಳ ಹಿಂದೆ ವಿದ್ಯುತ್ತ ಕಂಬ ಬಿದ್ದಿದ್ದು, ಅವರ ಮನೆಯ ಹಿಂದಿನ ರಸ್ತೆಯ ಮಾರ್ಗವಾಗಿ ವಿದ್ಯುತ್ ತಂತಿ ಜೋತುಬಿದ್ದಿದ್ದು ಕಂಬ ಸಂಪೂರ್ಣ ಬಾಗಿದೆ, ಅದೇ ರೀತಿ ಸಿಂಧನಮಡು, ರಂಜೊಳ್ ಮಾರ್ಗವಾಗಿ ಹೋಗುವುದು ಬ್ರಿಜ್ ಪಕ್ಕದಲ್ಲಿ ಹಾದು ಹೋಗಿರುವ ತಂತಿ ಸಂಪೂರ್ಣ ವಾಗಿ ಹಳ್ಳದ ಕಡೆ ಮುಖಮಾಡಿದೆ ಈ ವಿದ್ಯುತ್ ತಂತಿಗಳು ಅನಾಹುತಕ್ಕಾಗಿ ಕಾಯುತ್ತಿವೆ,ಇವುಗಳನ್ನು ತೇರುವುಗೊಳಿಸಲು ಜೆಸ್ಕಾಂ ಇಲಾಖೆಯು ಮುಂದಾಗಬೇಕೆಂದು ವರದಿಗಾರ ಮುಂದೆ ಅಳಲು ತೋಡಿಕೊಂಡಿದ್ದಾರೆ.