ವಿದ್ಯುತ್ ಕಂಬಗಳಲ್ಲಿ ಕಿತ್ತು ಬಿದ್ದಿರುವ ವೈರುಗಳು ಸಾರ್ವಜನಿಕರಲ್ಲಿ ಭಯಭೀತಿ

 ಹಿರಿಯೂರು.ಡಿ. 6: ಹಿರಿಯೂರು ನಗರದ ಪ್ರಧಾನ ರಸ್ತೆಯಲ್ಲಿ ಇರುವ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ವೈರ್ ಗಳು ಸರಿಯಾದ ನಿರ್ವಹಣೆ ಇಲ್ಲದೆ ಹೇಗೆಂದರೆ ಹಾಗೆ ಕಿತ್ತುಕೊಂಡು ಬಿದ್ದಿವೆ. ಎಷ್ಟೋ ಬಡಾವಣೆಗಳಲ್ಲಿ ವಿದ್ಯುದ್ದೀಪಗಳೇ ಇಲ್ಲ ದೀಪಗಳು ಕೆಟ್ಟಿದ್ದರೆ ಬದಲಾಯಿಸುವುದೇ ಇಲ್ಲ ಇತ್ತೀಚಿಗೆ ವಿದ್ಯುತ್ ಅವಘಡದಿಂದ ಫಕ್ರುದ್ದೀನ್ ಎಂಬ ಬಡ ಕೂಲಿಕಾರ್ಮಿಕ ಮೃತಪಟ್ಟಿದ್ದು ಆತನ ಕುಟುಂಬದ ಗತಿಯೇನು ಮಕ್ಕಳ ಶಿಕ್ಷಣಕ್ಕೆ ಯಾರು ಗತಿ ಪೋಷಕರ  ಗತಿ ಯೇನು ಇದನ್ನೆಲ್ಲಾ ನಗರಸಭೆ ಅರಿತುಕೊಳ್ಳಬೇಕು ವಿದ್ಯುತ್ ಕಂಬಗಳಲ್ಲಿ ಶಾರ್ಟ್ ಸರ್ಕ್ಯೂಟ್ ದೀಪಾವಳಿ ಪಟಾಕಿಗಳಂತೆ ಸಿಡಿಯುತ್ತಿರುವ ದೃಶ್ಯ ಪ್ರತಿದಿನ ಸಾಮಾನ್ಯವಾಗಿದೆ ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ ಇನ್ನೆಷ್ಟು ದುರಂತಗಳು ಸಂಭವಿಸಬೇಕು ಎಂದು ಪ್ರಶ್ನಿಸಿದ್ದಾರೆ ಹಿರಿಯೂರು ನಗರಸಭೆ ಅಧಿಕಾರಿ ವರ್ಗದವರು ಎಚ್ಚೆತ್ತುಕೊಳ್ಳಲಿ ತಕ್ಷಣ ವಿದ್ಯುತ್ ಕಂಬಗಳಲ್ಲಿರುವ ವೈರ್ ಗಳನ್ನು ಸೂಕ್ತ  ರೀತಿಯಲ್ಲಿ ಸರಿಪಡಿಸಿ ಪ್ರಾಣ ಹಾನಿಯಂತಹ ದುರಂತಗಳನ್ನು ತಪ್ಪಿಸಿ ಸಾರ್ವಜನಿಕರೊಂದಿಗೆ ಸಹಕರಿಸಬೇಕು ಎಂದು ಅನೇಕರು ಪತ್ರಿಕೆ ಮೂಲಕ ವಿನಂತಿಸಿಕೊಂಡಿದ್ದಾರೆ.