ವಿದ್ಯುತ್ ಏರಿಕೆ; ಏಕಾಂಗಿ ಪ್ರತಿಭಟನೆ

ಮೈಸೂರು:ಡಿ:30: ಏಕಾಏಕಿ ವಿದ್ಯುತ್ ಬೆಲೆಯನ್ನು ಜನರ ಗಮನಕ್ಕೆ ತರದೆ ಏರಿಸಿರುವುದು ಬಡಜನರ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ ಎಂದು ಎಲೆಕ್ಟ್ರಿಕಲ್ ನಾಗರಾಜ್.ಸಿ ಅಸಮಧಾನ ವ್ಯಕ್ತಪಡಿಸಿದರು.
ನಗರದ ಟೌನ್‍ಹಾಲ್ ಮುಂಭಾಗ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‍ರವರ ಪ್ರತಿಮೆ ಮುಂಭಾಗ ಏಕಾಂಗಿ ಪ್ರತಿಭಟನೆಯನ್ನು ನಡೆಸಿ ಮಾತನಾಡಿ, ಸರ್ಕಾರ ಸರ್ಕಾರ ಏಕಾಏಕಿ ರಾಜ್ಯಾಧ್ಯಂತ ಪ್ರತಿ ಯೂನಿಟ್‍ಗೆ 40 ಪೈಸೆ ಹೆಚ್ಚುವರಿ ಮಾಡಿದೆ. ಹಾಗೆಯೇ ರೆವಿನ್ಯೂ ಪರಮನೆಂಟ್ ವಿದ್ಯುತ್‍ಚ್ಛಕ್ತಿ ಸೌಲಭ್ಯಕ್ಕೆ 1 ಕಿಲೋ ವ್ಯಾಟ್‍ಗೆ ಹಳೆಯ ದರ 4,000 ರೂ.ಳನ್ನು ಇದ್ದಕ್ಕಿದ್ದಂತೆ 6,500 ರೂ.ಗಳಿಗೆ ಹೆಚ್ಚಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ರೆವಿನ್ಯೂ ಹಳೆಯ ದರ 3,500 ರೂ.ಗಳನ್ನು 5,750 ರೂ.ಗಳಿಗೆ ಏರಿಸಿರುವುದು ಕೊರೊನಾ ಸಂದರ್ಭದಲ್ಲಿ ಬಡ ಜನರಿಗೆ ಬರೆ ಎಳೆದಂತ್ತಾಗಿದೆ. ಆದ್ದರಿಂದ ಸರ್ಕಾರ ಹಳೆಯ ದರದ ನಿಯಮದಂತೆ ಮಾಡಬೇಕೆಂದು ಮನವಿ ಮಾಡಿದರು.