ವಿದ್ಯುತ್ ಏರಿಕೆ ಆದೇಶ ವಾಪಸ್‌ಗೆ ಆಗ್ರಹಿಸಿ ಬಾರ್‌ಕೋಟ್ ಚಳವಳಿ

ಕೋಲಾರ,ಜೂ,೧೫-ಬೆಲೆ ಏರಿಕೆ ಪ್ರಕೃತಿ ವಿಕೋಪ, ಬೆಳೆ ನಾಶದಿಂದ ತತ್ತರಿಸಿರುವ ರೈತ ಕೂಲಿ ಕಾರ್ಮಿಕರಿಗೆ ಹೊರೆಯಾಗುವ ವಿದ್ಯುತ್ ಏರಿಕೆ ಆದೇಶ ವಾಪಸ್ಸು ಪಡೆಯಬೇಕೆಂದು ರೈತ ಸಂಘದಿಂದ ಮುಳಬಾಗಿಲು ಬೆಸಾಂ ಕಛೇರಿ ಮುಂದೆ ಬಾರ್‌ಕೋಲ್ ಚಳುವಳಿ ಮಾಡುವ ಮುಖಾಂತರ ಬೆಸ್ಕಾಂ ಅಧಿಕಾರಿಗಳ ಮುಖಾಂತರ ಇಂಧನ ಸಚಿವರಿಗೆ ಮನವಿಸಲ್ಲಿಸಿದರು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಜನರ ತೆರಿಗೆ ಹಣವನ್ನು ಜನರಿಗಾಗಿಯೇ ಖರ್ಚು ಮಾಡಬೇಕಾಗಿರುವುದು ಕಲ್ಯಾಣ ರಾಜ್ಯಗಳ ಮೂಲಭೂತ ಕರ್ತವ್ಯ ಹಾಗೂ ಜವಾಬ್ದಾರಿ ಅದನ್ನು ಈಗಿನ ಸರ್ಕಾರ ಮಾಡುತ್ತಿರುವುದು ನಮ್ಮ ತೆರಿಗೆ ಹಣದ ಪಾಲಿನಿಂದ ನಮ್ಮ ಸಮುದಾಯಕ್ಕೆ ಸವಲತ್ತು ಕೊಡುತ್ತಿದ್ದಾರೆಂಬ ಮೇಲೆ ಅದನ್ನು ಬಿಟ್ಟಿ ಎನ್ನುವುದು ಹೇಗೆ ಸರಿ ಇನ್ನು ಮೇಲಾದರೂ ಈ ಬಿಟ್ಟಿ ಪದ ಪ್ರಯೋಗದಿಂದ ಫಲಾನುಭವಿಗಳನ್ನು ಅನುಮಾನಿಸುವುದು ಕೆಟ್ಟಚಾಳಿ ಬಿಟ್ಟಹಳ್ಳಿ ಒಳ್ಳೆಯದೆಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಸಂವಿಧಾನದ ಅಡಿಯಲ್ಲಿ ಮತದಾನದ ಮೂಲಕ ಆಯ್ಕೆಯಾಗುವ ಜನ ಪ್ರತಿನಿಧಿಗಳು ಜನರ ನಾಡಿ ಮಿಡಿತದ ಅರಿವಿರಬೇಕು. ಅದನ್ನು ಬಿಟ್ಟು ಅಧಿಕಾರ ಕುರ್ಚಿ ಹಿಡಿಯಲು ಸಂವಿಧಾನದ ಆಶೆಯಕ್ಕೆ ವಿರುದ್ದವಾಗಿ ತನ್ನ ಮನಸ್ಸಿಗೆ ಬಂದ ರೀತಿ ಉಚಿತ ಭಾಗ್ಯಗಳನ್ನು ನೀಡುವ ಮುಖಾಂತರ ರಾಜ್ಯದ ಆರ್ಥಿಕ ವ್ಯವಸ್ಥೆ ಬೀದಿಪಾಲು ಮಾಡುವ ಜೊತೆಗೆ ಜನ ಸಾಮಾನ್ಯರನ್ನು ಸೋಂಬೇರಿಗಳನ್ನಾಗಿ ಮಾಡಿ ಅನಕ್ಷರತಸ್ಥರ ಸಂಖ್ಯೆ ಹೆಚ್ಚಳ ಮಾಡುವ ಜೊತೆಗೆ ದೇಶದ ಭವಿಷ್ಯವನ್ನು ಸಮುದ್ರಕ್ಕೆ ತಳ್ಳುವ ಜನ ಪ್ರತಿನಿಧಿಗಳ ಜನ ವಿರೋಧಿ ನೀತಿಗೆ ರಾಜ್ಯಾದ್ಯಂತ ಆಕ್ರೋಷ ವ್ಯಕ್ತವಾಗುತ್ತಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರೂಕ್‌ಪಾಷ ಮಾತನಾಡಿ, ಉಚಿತ ೨೦೦ ಯುನಿಟ್ ವಿದ್ಯುತ್ ನೀಡುವ ಗ್ಯಾರಂಟಿ ಮುಖಾಂತರ ಜನ ಸಾಮಾನ್ಯರನ್ನು ಒಂದು ಕಡೆ ಉಚಿತ ಯೋಜನೆಯಲ್ಲಿ ದಿಕ್ಕುತಪ್ಪಿಸುವ ಜೊತೆಗೆ ಮತ್ತೊಂದಡೆ ಹಿಂಬಾಗಿಲಿನಿಂದ ಜನ ಸಾಮಾನ್ಯರಿಗೆ ಹೊರೆಯಾಗುವ ವಿದ್ಯುತ್ ದರ ಏರಿಕೆ ಮಾಡುವ ಮುಖಾಂತರ ಕೈಗಾರಿಕಾ ವಾಣಿಜ್ಯ ಕೃಷಿ ಮತ್ತಿತರ ಕ್ಷೇತ್ರಗಳ ಮೇಲೆ ತಮ್ಮ ಪ್ರತಾಪವನ್ನು ತೋರಿಸಲು ಮುಂದಾಗಿರುವುದು ನಾಚಿಕೆಯಿಲ್ಲದ ಜನ ಪ್ರತಿನಿಧಿಗಳ ಜನ ವಿರೋಧಿನೀತಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಜಿಲ್ಲಾಧ್ಯಕ ಈಕಂಬಳ್ಳಿ ಮಂಜುನಾಥ, ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಬಂಗಾರಿಮಂಜು, ಮುಖಂಡರಾದ ಯಾರಂಘಟ್ಟ ಗಿರೀಶ್, ಸುನಿಲ್‌ಕುಮಾರ್, ರಾಜೇಶ್, ಭಾಸ್ಕರ್, ಗುರುಮೂರ್ತಿ, ವಿಜಯ್‌ಪಾಲ್, ವಿಶ್ವ, ಹೆಬ್ಬಣಿ ಆನಂದರೆಡ್ಡಿ ,ಆಂಬ್ಲಿಕಲ್ ಮಂಜುನಾಥ್, ನಂಗಲಿ ನಾಗೇಶ್, ವೇಣು, ನಲ್ಲಂಡಹಳ್ಳಿ ಕೇಶವ, ಮಂಗಸಂದ್ರ ತಿಮ್ಮಣ್ಣ, ಜುಬೇರ್‌ಪಾಷ, ಅದಿಲ್‌ಪಾಷ, ರಾಮಸಾಗರ ವೇಣು, ಯಲ್ಲಣ್ಣ, ಹರೀಶ್, ಮಾಸ್ತಿ ವೆಂಕಟೇಶ್ ಇದ್ದರು.