ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಶಾಸಕ ದದ್ದಲ್ ಮನವಿ

ರಾಯಚೂರು.ಜ.೦೭- ಶಾಸಕ ದದ್ದಲ ಬಸವನಗೌಡ ಅವರು ನಿನ್ನೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಡಿಹೆಚ್‌ಆರ್ ಅವರನ್ನು ಭೇಟಿ ಮಾಡಿ, ಗ್ರಾಮೀಣ ಕ್ಷೇತ್ರದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರಾದ ಪೋನ್ನುರಾಜ ಹಾಗೂ ಪ್ರಭುಲಿಂಗಗೌಡ ಕೌಳಿಕಟ್ಟಿ ಅವರೊಂದಿಗೆ ಚರ್ಚಿಸಿದರು. ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳು ಕಳೆದ ಒಂದು ವರ್ಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದು, ಇವುಗಳನ್ನು ಅತಿ ಶೀಘ್ರವಾಗಿ ಆರಂಭಿಸಬೇಕೆಂದು ಹಾಗೂ ಶಕ್ತಿನಗರ ಸುತ್ತಮುತ್ತಲಿನ ಭೂ ಸಂತ್ರಸ್ಥಱಿಗೆ ಮೊದಲ ಆದ್ಯತೆ ಮೇರೆಗೆ ಕೆಲಸ ನೀಡುವಂತೆ ಮನವಿ ಮಾಡಿದರು. ಈಗಾಗಲೇ ಕೆಲಸದಿಂದ ತೆಗೆದಂತಹ ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವುದರೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮನವಿ ಮಾಡಿದರು.