ವಿದ್ಯುತ್ ಅವಘಡ: ಫುಟ್‍ವೇರ್ ಅಂಗಡಿಗೆ ಬೆಂಕಿ


ಹುಬ್ಬಳ್ಳಿ,ಆ.14: ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಫುಟ್‍ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಇಂದು ಬೆಳಗಿನಜಾವ ನಗರದ ಪೆಂಡಾರಗಲ್ಲಿಯಲ್ಲಿ ನಡೆದಿದೆ.
ತೇರದಾಳ ಎಂಬುವವರಿಗೆ ಸೇರಿದ ಫುಟ್‍ವೇರ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.
ಬೆಂಕಿಯಿಂದ ಸಂಭವಿಸಿರಬಹುದಾದ ಹಾನಿಯನ್ನು ಅಂದಾಜಿಸಬೇಕಿದೆ.
ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.