ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.17 ಇತ್ತೀಚೆಗೆ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ  ಅಂಬಳಿ ಭರಮಪ್ಪ ಕುಟುಂಬಕ್ಕೆ ಶಾಸಕ ನೇಮಿರಾಜ್ ನಾಯ್ಕ್  ಮಂಗಳವಾರ ಪರಿಹಾರದ ಚೆಕ್ ವಿತರಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕುಟುಂಬದ ಪತ್ನಿಗೆ ಸಾಂತ್ವಾನ ಹೇಳುವ ಮೂಲಕ ಜೆಸ್ಕಾಂ ಪರಿಹಾರ ನಿಧಿಯಡಿ 5 ಲಕ್ಷ ಮೊತ್ತದ ಚೆಕ್ ಅನ್ನು ಮೃತನ ಪತ್ನಿ ರತ್ನಮ್ಮ ಗೆ ಹಸ್ತಾಂತರಿದರು.
ಜೆಸ್ಕಾಂ ಇಲಾಖೆಯ ಇ ಇ ಶೇಖರ್ ಬಹುರೂಪಿ, ಎ ಎ ಇ ತೇಜ ನಾಯ್ಕ್, ಎಇಇ ಭಾಸ್ಕರ್, ಕೃಷ್ಣ, ಮುಖಂಡರಾದ ಬನ್ನಿಗೋಳ್ ವೆಂಕಣ್ಣ , ರಾಜಲಿಂಗಪ್ಪ, ಮೈನಹಳ್ಳಿ ಕೊಟ್ರೇಶಪ್ಪ, ಜಿಎಂ ಜಗದೀಶ್, ಚಿತವಾಗಿ ಪ್ರಕಾಶ್ ಬ್ಯಾಟಿ ನಾಗರಾಜ್ ಬಶೀರ್  ಹನುಮಂತಪ್ಪ ಸಂಪತ್ ಕುಮಾರ್ ನಾಯ್ಕ್, ಇತರರಿದ್ದರು