ವಿದ್ಯುತ್ ಅವಘಡಕ್ಕೆ ರೈತ ಬಲಿ

ಇಂಡಿ :ಮೇ.4: ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಗೆ ತೋಟದಲ್ಲಿನ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಅದನ್ನು ತುಳಿದಿರುವುದರಿಂದ ವಿದ್ಯುತ್ ತಗುಲಿ ರೈತನೊರ್ವ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ.ಅಂಜುಟಗಿ ಗ್ರಾಮದ ರೈತ ರಾಯಪ್ಪ ಶಿವಣ್ಣ ಡಂಗಿ (48) ಮೃತ ವ್ಯಕ್ತಿಯಾಗಿದ್ದಾನೆ.ಮೃತ ರೈತನಿಗೆ 3 ಜನ ಮಕ್ಕಳಿದ್ದಾರೆ. ಈ ಕುರಿತು ಝಳಕಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಆಗ್ರಹ:

ವಿದ್ಯತ್ ತಂತಿ ಅವಘಡದಿಂದ ಮೃತಪಟ್ಟ ರೈತ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ನೀಡಬೇಕು ಎಂದು ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೃತ ರೈತ ಕುಟುಂಬದ ಸದಸ್ಯರಿಗೆ ಭೇಟಿಯಾಗಿ ಸಾಂತ್ವಾನ ಹೇಳಿದರು.