ವಿದ್ಯುತ್ ಅವಗಡ ಎಮ್ಮೆ ಹಸುಗಳ ಸಾವು

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೨೨:-ಪಟ್ಟಣದ ಹೊರ ವಲಯದ ಉಪ್ಪಾರಗೇರಿಬಳಿ ವಿದ್ಯುತ್ ಅವಗಡದಿಂದ ಗೌಳಿ ನಾಗಪ್ಪನವರಿಗೆ ಸೇರಿದ ಎಮ್ಮೆ ಹಸುಗಳು ಸಾವನ್ನಪ್ಪಿರುವ ಘಟನೆ  ಜರುಗಿದೆ.ಆರು ಎಮ್ಮೆ ಎರಡು ಆಕಳು ಸಾವಿಗಿಡಾಗಿದೆ ಇದರಿಂದ ಸಾಕಿದ ಎಮ್ಮೆ ಆಕಳು ಸಾವಿಗೀಡಾದ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನೆ ಮಾಡುತ್ತಲೇ ಬದುಕು ಕಟ್ಟಕೊಂಡ ಗೌಳಿ ನಾಗಪ್ಪ ಹಾಗೂ ಅವರ ಕುಟುಂಬಕ್ಕೆ ಬದುಕು ಕಟ್ಟಿಕೊಂಡು ಜೀವನ ಮಾಡುವದು ಕಷ್ಟಕರವಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌, ಕಂದಾಯ ಹಾಗೂ ಜೆಸ್ಕಾಂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎಮ್ಮೆ ಕಳೆದುಕೊಂಡ ಗೌಳೆರ್ ನಾಗಪ್ಪರಿಗೆ ಪರಿಹಾರ ನೀಡುವ ಭರವಸೆಯನ್ನು ಅಧಿಕಾರಿಗಳು ಭರವಸೆ ನೀಡಿದ್ದಾರೆ.ಇದರಿಂದ ಸುಮಾರು ನಲವತ್ತು ಐವತ್ತು ಸಾವಿರಾರು ರೂಪಾಯಿಗಳಿಗೆ ಬೆಲೆ ಬಾಳುವ ಎಮ್ಮೆ ಆಕಳು ಸಾವಿಗೀಡಾದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಭಾರಿ ಅನ್ಯಾಯ ಆಗಿದೆ ಎಂದು ಹೆಳಲಾಗಿದೆ..