ವಿದ್ಯುತ್ ಅದಾಲತ್ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.17: ತಾಲೂಕಿನ ರಾಂಪುರ ಗ್ರಾಮದ ಶಾಲಾ ಆವರಣದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜನರಿಗೆ ಸ್ಥಳದಲ್ಲಿಯೇ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಗುಲ್ಬರ್ಗ ವಿದ್ಯುತ್ ನಿಯಮಿತ ಕಂಪನಿ ವತಿಯಿಂದ ಕೂಡ್ಲಿಗಿಯ ವಿದ್ಯುತ್ ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಣಾಧಿಕಾರಿಯಾದ ಏಕಾಂತ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಒಟ್ಟು 25 ಅರ್ಜಿಗಳು ಬಂದಿದ್ದು, ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ 8 ಅರ್ಜಿಗಳು, ಹೊಸದಾಗಿ ನಿರ್ಮಾಣವಾದ ಮನೆಗಳಿಗೆ  ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವಂತೆ 9 ಅರ್ಜಿ, ಮನೆ ಮೇಲೆ ಹಾದು ಹೋದ ವಿದ್ಯುತ್ ಲೈನ್ ನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು  ಎಂದು 7 ಅರ್ಜಿ, ಇತರೆ ಸಮಸ್ಯೆಗೆ ಒಂದು ಅರ್ಜಿ ಬಂದಿದೆ ಎಂದು ಏಕಾಂತ್ ತಿಳಿಸಿದರು. ಈ ಸಂದರ್ಭದಲ್ಲಿ ಕಿರಿಯ ಇಂಜಿನಿಯರ್ ಕೊಟ್ರೇಶ್, ಅಂಜಿನಪ್ಪ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.