ವಿದ್ಯುತ್ ಅದಾಲತ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

ಸಿರವಾರ.ಜು.೧೭-ವಿದ್ಯುತ್ ಇಲಾಖೆಗೆ ಗ್ರಾಹಕರು ಸಕಾಲದಲ್ಲಿ ಬಿಲ್ ಪಾವತಿ ಮಾಡಿದರೆ, ಸಿಬ್ಬಂದಿಗಳಿಗೆ ಸಂಬಳ ಬರುತ್ತದೆ, ಆದರಿಂದ ನಿಮ್ಮ ಆಯಾ ತಿಂಗಳ ವಿದ್ಯುತ್ ಬಿಲ್ ಸಕಾಲದಲ್ಲಿ ಪಾವತಿ ಮಾಡಿ, ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳಿಗೆ, ದೂರುಗಳನ್ನು ಆಲಿಸಿ ಇತ್ಯರ್ಥ ಮಾಡಲು ಈ ಕಾರ್ಯಕ್ರಮವನ್ನು ಇಂಧನ ಇಲಾಖೆ ಆಯೋಜನೆ ಮಾಡಿದೆ ಗ್ರಾಹಕರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜೇಸ್ಕಾಂ ಸಿರವಾರ ಉಪವಿಭಾಗದ ಎಇಇ ಬೆನ್ನಪ್ಪ ಕರಿಬಂಟನಾಳ ಹೇಳಿದರು.
ತಾಲೂಕಿನ ಹರವಿ ಗ್ರಾಮದಲ್ಲಿ ಜೇಸ್ಕಾಂ ಇಲಾಖೆಯಿಂದ ಆಯೋಜನೆ ಮಾಡಿದ ವಿದ್ಯುತ್ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯುತ್ ಸಂಬಂದಿಸಿ ದೂರುಗಳನ್ನು ಹೊತ್ತು ಉಪವಿಭಾಗ, ವಿಭಾಗಕ್ಕೆ ಗ್ರಾಹಕರು, ರೈತರು, ಸಾರ್ವಜನಿಕರು ಆಗಮಿಸುತ್ತಾರೆ, ಆದರೆ ಉನ್ನತ ಅಧಿಕಾರಿಗಳು ಸಿಗದೆ ಅವರಿಗೆ ಪರಿಹಾರ ಸಿಗುವುದಿಲ್ಲ.
ಇದನ್ನು ಅರಿತು, ಪ್ರತಿ ಗ್ರಾಮಗಳಿಗೆ ಜೇಸ್ಕಾಂ ಇಲಾಖೆಯ ಅಧಿಕಾರಿಗಳೆ ಆಗಮಿಸಿ ವಿದ್ಯುತ್ ಸಂಬಂದ ದೂರುಗಳನ್ನು ಆಲಿಸಿ ಸ್ಥಳದಲ್ಲಿಯೆ ಬಗ್ಗೆ ಹರಿಸುವ ಕೆಲಸ ಆಗುತ್ತಿದೆ. ಗ್ರಾಹಕರು ಪ್ರತಿ ತಿಂಗಳ ಬಿಲ್ ಪಾವತಿ ಮಾಡಿ, ಎಲಿಯಾದರೂ ವಿದ್ಯುತ್ ವೈರ್ ಕಟ್ಟಾದರೆ ಸಿಬ್ಬಂದಿಗೆ, ಅದಿಕಾರಿಗಳಿಗೆ ತಿಳಿಸಿ ಆಗುವ ಅನಾಹುತಗಳನ್ನು ತಪ್ಪಿಸಬೇಕು, ಮಳೆಗಾಲ ಇರುವುದರಿಂದ ಕಂಬಗಳಿಗೆ ಬಟ್ಟೆ ಹಾಕುವುದು, ಜಾನುವಾರುಗಳನ್ನು ಕಟ್ಡಿ ಹಾಕಿಬಾರದು.
ಈಗಾಗಲೇ ಇಲಾಖೆಯಿಂದ ಎಸ್‌ಸಿಎಸ್‌ಟಿ ಜನಾಂಗದ ವಿದ್ಯುತ್ ಬಳಕೆ ೭೫ ಯೂನೀಟ್ ಸಬ್ಸಿಡಿ ನೀಡುವುದಕ್ಕೆ ದಾಖಲಾತಿ ಸಂಗ್ರಹ ಕೆಲಸ ಪ್ರಗತಿಯಲ್ಲಿದೆ, ಪ್ರಮಾಣ ಪತ್ರಗಳನ್ನು ನೀಡದೆ ಇರುವವರು ಶೀಘ್ರ ಇಲಾಖೆಗೆ ನೀಡಿ. ಗ್ರಾ.ಪಂ ನಿಂದ ಬಿದಿ ದೀಪ, ಬೋರ್ ವೇಲ್ ಬೀಲ್ ಪಾವತಿಸಬೇಕು. ಎಲ್ಲಾರೂ ಮಿಟರ್ ಅಳವಡಿಸಿಕೊಳಬೇಕು.
ವಿದ್ಯುತ್ ಅಪಘಾತ ಸಂಭವಿಸಿದಾಗ ಪರಿಹಾರಕ್ಕೆ ಸಹಾಯವಾಗುತ್ತದೆ. ಅಕ್ರಮವಾಗಿ ಸಂಪರ್ಕ ಪಡೆದವರ ಮೇಲೆ ಇಲಾಖೆ ಕ್ರಮಕೈಗೊಳುತ್ತಿದೆ ಎಂದರು. ಜೆಡಿಎಸ್ ಯುವ ಮುಖಂಡ ಗೋಪಾಲ ನಾಯಕ ಹರವಿ ಮಾತನಾಡಿ ಕಂದಾಯ ಇಲಾಖೆ ಮಾದರಿಯಲ್ಲಿ ಇಂಧನ ಇಲಾಖೆಯು ಸಹ ಅದಾಲತ್ ಕಾರ್ಯಕ್ರಮ ಆಯೋಜನೆ ಮಾಡಿ ಜನಸ್ನೇಹಿ ಇಲಾಖೆಯಾಗಿದೆ.
ಗ್ರಾಮಗಳಲ್ಲಿ ಹಳೇಯ ವಿದ್ಯುತ್ ವೈರ್, ಕಂಬಗಳನ್ನು ಬದಲಾವಣೆ ಮಾಡಿ, ಮನೆಗಳ ಮೇಲೆ ೧೧ ಕೆವಿ ಸಾಮರ್ಥ್ಯದ ವಿದ್ಯುತ್ ವೈರ್ ಸ್ಥಳಾಂತರ ಮಾಡಿ, ನಿರಂತರವಾಗಿ ವಿದ್ಯುತ್ ಹರಿಸಬೇಕು, ಸ್ವಲ್ಪ ಮಳೆ ಬಂದರೆ ವಿದ್ಯುತ್ ಕೈಕೊಟ್ಟು ೫-೬ ಗಂಟೆಯ ನಂತರ ನೀಡುತ್ತಿರಿ, ಅದನ್ನು ಸರಿಪಡಿಸಬೇಕು. ಇಲಾಖೆಯಿಂದ ಇಂತಹ ಕಾರ್ಯಕ್ರಮಗಳ ನಿರಂತರವಾಗಿ ಜರುಗಿದರೆ ಸಾರ್ವಜನಿಕರು ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದರು. ಪ್ರಭಾರಿ ಶಾಖಾದಿಕಾರಿ ಶಿವಮೂರ್ತಿ, ಪ್ರಭಾಕರ ಪಾಟೀಲ್, ಶಿವಯ್ಯ, ಸಹಾಯಕ ಶಿವಪುತ್ರಪ್ಪ, ಹರವಿ ಗ್ರಾ.ಪಂ ಅಧ್ಯಕ್ಷ ಹನುಮಂತ,ಉಪಾದ್ಯಕ್ಷ ಶಿವಮ್ಮ, ಪಿಡಿಓ ಸೈಯದ್ ಹುಸೇನ್, ಕಾರ್ಯದರ್ಶಿ ವಿರುಪಾಕ್ಷಯ್ಯ ಸ್ವಾಮಿ, ಸದಸ್ಯ ಅಂಬಣ್ಣ ಶರಣಬಸವ, ಯಂಕಪ್ಪ, ಯಲ್ಲಪ್ಪ ಬೊನ್ನಕ್ಕಿ, ಬಸ್ಸಪ್ಪ, ಬಸವರಾಜ ಕಾರಮೆಣಸಿ, ಹನುಮನಗೌಡ, ಶಿವಮೂರ್ತಿ ಸ್ವಾಮಿ, ಹನುಮಂತಿ ಹಳ್ಳಿ, ವಿರೇಶ ಹರವಿ ಸೇರಿದಂತೆ ಇನ್ನಿತರರು ಇದ್ದರು.