ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿಗೆ ಶೇ100 ಉತ್ತಮ ಫಲಿತಾಂಶ

ಸೈದಾಪುರ:ಆ.5:ಇಲ್ಲಿನ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಜೂನ 2023ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ವತಿಯಿಂದ ಜರುಗಿದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆ ಬರೆದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಲ್ಲಿ ಶೇ100 ರಷ್ಟು ಫಲಿತಾಂಶ ಬಂದಿದೆ. 18 ಪ್ರಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ನಾರಾಯಣ ನರಸಪ್ಪ ಶೇ92.25, ಪವಿತ್ರ ಮಲ್ಕಪ್ಪ ಶೇ91.75, ರಾಚಮ್ಮ ನಾಗಪ್ಪ ಶೇ91.62, ಮಹೇಶ್ವರಿ ಬಸಲಿಂಗಪ್ಪ 91.5, ಶಕೀರಬೇಗಂ ಹುಸೇನ ಪಟೇಲ ಶೇ91.37, ರಾಧಮ್ಮ ಬಸವರಾಜ ಶೇ91.25, ಸಾನೀಯ ಸಮೀರಿನ ಅಲ್ಲಾಭಾಷ 90.12, ಗೌರಿಶ್ರೀ ಮಲ್ಕಪ್ಪ 90.12 ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಪ್ರಥಮ ವರ್ಷದಲ್ಲಿ ಪರೀಕ್ಷೆ ಬರೆದ ಪ್ರಶಿಕ್ಷಣಾರ್ಥಿಗಳ ಶೇ93 ರಷ್ಟು ಫಲಿತಾಂಶ ಬಂದಿದೆ. ಸ್ವಾತಿ ಚಂದ್ರಮಣ್ಣ ಶೇ89, ಶ್ವೇತಾಶ್ರೀ ಚನ್ನಬಸ್ಸಪ್ಪಗೌಡ ಶೇ88, ನಾಗರೆಡ್ಡಿ ರಮೇಶ ಶೇ88, ನಾಗಮ್ಮ ನಾಗಪ್ಪ ಶೇ87.37, ಸ್ವಾವಿತ್ರಿ.ಜಿ ಶೇ86.37, ರಾಜಶ್ರೀ ಬಸ್ಸಯ್ಯ 86.12, ರಹೀಮ ನಬಿಸಾಬ ಶೇ85.87 ಅತಿ ಹೆಚ್ಚು ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ.
ಗಡಿ ಗ್ರಾಮೀಣ ಭಾಗದ ಪ್ರಶಿಕ್ಷಣಾರ್ಥಿಗಳ ಈ ಸಾಧನೆ ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಉಪಾಧ್ಯಕ್ಷ ಪಲ್ಲಾ ಲಕ್ಷ್ಮೀಕಾಂತರೆಡ್ಡಿ, ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಪಾಟೀಲ, ಚಂದ್ರಶೇಖರ ಐರಡ್ಡಿ, ಸಂಗರೆಡ್ಡಿಗೌಡ ಪೋ.ಪಾ.ಮಲ್ಹಾರ, ಶರಣಪ್ಪಗೌಡ ಕೌಳೂರ, ಸಿದ್ರಾಮಪ್ಪಗೌಡ ಗೊಂದೆಡಗಿ, ಚೆನ್ನಾರಡ್ಡಿ ಹುಣಸೇಮರ, ಸೂರ್ಯಪ್ರಕಾಶ ಆನಂಪಲ್ಲಿ, ಪ್ರಭುಲಿಂಗ ವಾರದ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಪೂರ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಲೇಜಿನ ಫಲಿತಾಂಶ ಸಂಸ್ಥೆಯ ಮಹತ್ವ ಹೆಚ್ಚಾಗುವಂತೆ ಮಾಡಿದೆ. ಈ ವಿದಧ ಸಾಧನೆಗೆ ಪ್ರಶಿಕ್ಷಣಾರ್ಥಿಗಳ, ಉಪನ್ಯಾಸಕರ ಪ್ರಯತ್ನ ಬಹು ಮುಖ್ಯವಾಗಿದೆ. ಉತ್ತಿರ್ಣರಾದವರು ಉತ್ತಮ ಶಿಕ್ಷಕರಾಗಿ ನೇಮಕ ಹೊಂದಿ ಹಿಂದುಳಿದ ಈ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ನ ಮಾಡುವಂತಾಗಲಿ.

                              ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಧ್ಯಕ್ಷರು ವಿ.ವ.               ಸಂಘ ಸೈದಾಪುರ