ವಿದ್ಯಾಸಾಗರ್ ಶೆಟ್ಟಿಯವರಿಗೆ ಡಾಕ್ಟರೇಟ್

ಕಾರ್ಕಳ,ಏ.೨-ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಸಹಪ್ರಾಧ್ಯಾಪಕ ವಿದ್ಯಾಸಾಗರ ಶೆಟ್ಟಿ ಅವರು ಮಂಡಿಸಿದ “ಡೆವಲಪ್ಮಂಟ್ ಆಂಡ್ ಸ್ಟಡಿ ಆಫ್ ಮೆಕ್ಯಾನಿಕಲ್, ಥಮ೯ಲ್ ಪ್ರಾಪರ್ಟೀಸ್ ಆಂಡ್ ಬಿಹೇವಿಯರ್ ಆಫ್ ನಿಕೆಲ್ ಎಲಾಯ್ ರಿಇನ್ಫೋರ್ಸ್ಡ್ ವಿದ್ ಎಸ್ ೧೦೨ ಆಂಡ್ ಎ.ಎಲ್ ೨೦೩ ಹೈಬ್ರಿಡ್ ಮೆಟಲ್ ಮ್ಯಾಟ್ರಿಕ್ಸ ಕಾಂಪೋಸಿಟ್ಸ್” ಎಂಬ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಯೂನಿವರ್ಸಿಟಿ ಬಿಡಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್, ದಾವಣಗೆರೆಯ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ವಿಜಯ ಕುಮಾರ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಅವರು ಮಂಡಿಸಿದ್ದರು.
ವಿದ್ಯಾಸಾಗರ ಶೆಟ್ಟಿಯವರು ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಕೊಯಿಕಾಡಿನೂಜಿನ ಮನೆ (ದೊಡ್ಡಮನೆ) ನಿವೃತ್ತ ಮುಖ್ಯೋಪಾಧ್ಯಾಯ ದಿವಂಗತ ಕೆ. ಚಂದ್ರಶೇಖರ ಶೆಟ್ಟಿ ಹಾಗು ಪಾರ್ವತಿ ಸಿ. ಶೆಟ್ಟಿಯವರ ಪುತ್ರ.