ವಿದ್ಯಾವಿಷಯಕ ಪರಿಷತ್ತಿಗೆ ಸುನೀಲಗೌಡ ಪಾಟೀಲರ ನಾಮನಿರ್ದೇಶನ

ವಿಜಯಪುರ, ಜು.23-ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರವರನ್ನು ನಾಮನಿರ್ದೇಶನಗೊಳಿಸಿ, ವಿಧಾನಪರಿಷತ್ ಸಭಾಪತಿ ಆದೇಶ ಹೊರಡಿಸಿದ್ದಾರೆ.
ಸುನೀಲಗೌಡ ಪಾಟೀಲರವರು ವಿಧಾನಪರಿಷತ್ ಸದಸ್ಯರಾಗಿರುವ ಚಾಲ್ತಿ ಅವಧಿ ದಿ.05.01.2028 ವರೆಗೆ ಈ ನಾಮನಿರ್ದೇಶನ ಜಾರಿಯಲ್ಲಿ ಇರಲಿದೆ ಎಂದು ವಿಧಾನ ಪರಿಷತ್ ಸಭಾಪತಿಗಳು ಆದೇಶದಲ್ಲಿ ತಿಳಿಸಿದ್ದಾರೆ.