ವಿದ್ಯಾವಂತರೇ ದುಶ್ಚಟಗಳಿಗೆ ಹೆಚ್ಚು ದಾಸರಾಗಿದ್ದಾರೆ:ಪ್ರೇಮ ಸಾಗರ ದಾಂಡೆಕರ

ಬೀದರ:ಸೆ.19: ತಂಬಾಕು ಸಿಗರೆಟ್ ಮದ್ಯವ್ಯಸನಿಗಳ ಉತ್ಪಾದನೆಯಿಂದ ದೇಶಕ್ಕೆ ಆಗುತ್ತಿರುವ ಲಾಭಕ್ಕಿಂತ, ಅದರ ಸೇವನೆಯಿಂದ ಆಗುತ್ತಿರುವ ಹಾನಿಯೇ ಹೆಚ್ಚು, ವಿದ್ಯಾವಂತರೇ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಶ್ರೀ ಪ್ರೇಮ ಸಾಗರ ದಾಂಡೆಕರ ತಿಳಿಸಿದರು. ಪಟ್ಟಣದ ಸರಕಾರಿ ಐ.ಟಿ.ಐ. ಕಾಲೇಜು ಮತ್ತು ಸಾಹಿತ್ಯ ರತ್ನ ಅಣ್ಣಭಾವು ಸಾಠೆ ಲೊಕಮಂಚ (ಟ್ರಸ್ಟ್) ಸಂಯುಕ್ತಶ್ರಯದಲ್ಲಿ ನಡೆದ ದುಶ್ಚಟಗಳ ದುಸ್ಪರಿಣಾಮದ ಕುರಿತು ನಾಟಕ ಕಾರ್ಯಕ್ರಮದಲ್ಲಿ ದುಶ್ಚಟಗಳ ಬಗ್ಗೆ ಉಪನ್ಯಾಸ ನೀಡಿದರು. ವಯೋಸಹಜ ಕುತೂಹಲದಿಂದ ಇಂದಿನ ಯುವ ಜನರು ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ಪೋಷಕರು ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸದಿರುವುದು. ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ನೀಡುತ್ತಿರುವುದು ದುಶ್ಚಟಕ್ಕೆ ಪ್ರೇರೇಪಿಸುತ್ತಿವೆ. ಈ ಬಗ್ಗೆ ಯುವ ಜನತೆ ಎಚ್ಚರಿಕೆ ವಹಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಕಾಲಕ್ಕೆ ತಕ್ಕ ಮಾರ್ಗದರ್ಶನ ನೀಡಬೇಕು. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿ ಗಳನ್ನು ತಿದ್ದುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಮದ್ಯಪಾನ ಒಂದು ಶೋಕಿಗೆ ಆರಂಭವಾಗಿ ಕೊನೆಗೆ ಬದುಕನ್ನೆ ಕೊನೆ ಗೊಳಿಸುವವರೆಗೆ ತಲುಪುತ್ತಿದೆ. ಗ್ರಾಮೀಣ ಪ್ರದೇಶ ಕ್ಕಿಂತ ನಗರ ಪ್ರದೇಶಗಳಲ್ಲಿ ಮದ್ಯಪಾನದ ಮತ್ತಿ ನಲ್ಲಿ ಅನೇಕ ಅಪರಾಧಗಳು ಘಟಿಸುತ್ತಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿದೆ. ಆದುದರಿಂದ ವಿದ್ಯಾರ್ಥಿ ಗಳು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣದ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸ್ಕಾಂ ಲೆಕ್ಕಾಧಿಕಾರಿ ಶ್ರೀ ಸುಮಂಥ ಕಟ್ಟಿಮನಿ ಮಾತನಾಡಿ, ತಂತ್ರಜ್ಞಾನ ಮುಂದುವರಿದಂತೆ ಯುವಜನತೆ ಸಂಸ್ಕøತಿಯನ್ನು ಮರೆಯುತ್ತಿರುವುದೇ ದುಶ್ಚಟಗಳು ಹೆಚ್ಚಾಗಲು ಕಾರಣವಾಗಿದೆ. ಮೊಬೈಲ್, ಇಂಟರ್‍ನೆಟ್, ಸಾಮಾಜಿಕ ಜಾಲ ತಾಣಗಳು ಮಾಹಿತಿ ಬಳಕೆಗಿಂತ ಚಟಗಳಾಗಿ ಪರಿವರ್ತನೆಯಾಗುತ್ತಿದ್ದು ಮಾನಸಿಕ ರೋಗಿಗಳನ್ನಾಗಿಸುತ್ತಿದೆ. ಇವುಗಳ ಬಳಕೆಯ ಬಗ್ಗೆ ಯುವಜನರು ಜಾಗೃತಿ ವಹಿಸಬೇಕು ಎಂದರು.
ಎಲ್ಲ ವಿದ್ಯಾರ್ಥಿಗಳಿಗೆ ಸಂವಿಧಾನ ಪಿಠಿಕೆ ನಿಡುವ ಮುಖಾಂತರ ಸಂವಿಧಾನ ಅರಿತುಕೊಂಡು ದುಶ್ಚಟದಿಂದ ದೊರವಿರಿ ಎಂದು ಸಲಹೆ ನಿಡಿದರು. ಜಿಲ್ಲಾ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯವಸ್ಥಪಕಾರ ಮಾನ್ಯ ಸುಭಾಷ ರತ್ನರವರು ಇಂದಿನ ಪೀಳಿಗೆಗೆ ಶಿಕ್ಷಣ ಕುಂಟಿತಕ್ಕೆ ದುಶ್ಚಟಗಳ ದುಷ್ಪರಿಣಾಮ ಬೀರುತ್ತಿದೆ ಎಂದರು.
ಐ.ಟಿ.ಐ. ಪ್ರಾಂಶುಪಾಲರಾದ ಶಿವಶಂಕರ ಟೊಕರೆ ಮಾತನಾಡಿ, ಭಾರತದಂತಹ ಸಾಂಸ್ಕøತಿಕ ಪ್ರಧಾನ ದೇಶದಲ್ಲಿ ಮಹಿಳೆಯರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ದುಶ್ಚಟಗಳ ಪರಿಣಾಮಗಳ ಬಗ್ಗೆ ಯುವಜನತೆಯಲ್ಲಿ ಅರಿವು ಮುಖ್ಯ. ಇದು ಭೀಕರ ಪರಿಣಾಮಗಳನ್ನು ಜೀವನದಲ್ಲಿ ಎದುರಿಸುವ ಬದಲು ಇವುಗಳಿಂದ ದೂರವಿರಬೇಕು. ಮತ್ತು ನೆರೆಹೊರೆಯವರು ದುಶ್ಚಟಗಳಿಗೆ ಬಲಿಯಾಗಿರುವವರನ್ನು ಎಚ್ಚರಿಸಿ ಅದರಿಂದ ವಿಮುಕ್ತರಾಗುವಂತೆ ಮಾಡಬೇಕು ಎಂದು ತಿಳಿಸಿದರು.
ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಮಾಡಿದರು. ಸಾಹಿತ್ಯ ರತ್ನ ಅಣ್ಣ ಭಾವು ಸಾಠೆ ಸಾಹಿತ್ಯಿಕ ಮತ್ತು ಸಾಂಸ್ಕøತಿಕ (ರಿ) ಅಧ್ಯಕ್ಷರಾದ ಎಂ.ಎಸ್. ಮನೋಹರ ನಿರ್ದೆಶನ ಮತ್ತು ರಚನೆಯಲ್ಲಿ ರೂಪುಗೊಂಡ ದುಶ್ಚಟಗಳ ದುಷ್ಪರಿಣಾಮ ನಾಟಕದ ಸಹ ನಿರ್ದೆಶಕರಾದ ಸಮೂಹ ಸಂಪನ್ಮೂಲ ವ್ಯಕ್ತಿ ರಾಜಗಿರಾ ಮಹೇಶ ಧೂಪೆ ಇವರ ಕಲಾ ಬಳಗದ ಬಸಯ್ಯ ಸ್ವಾಮಿ, ಮಿಲಿಂದ ಶಿಂಧೆ, ತುಕರಾಮ ನಾಗೂರ, ಲಕ್ಷ್ಮಣ ತ್ರಿವೇಣಿ, ಗಂಗಾಧರ, ಇವರೆಲ್ಲರ ಬಳಗದಿಂದ ನಾಟಕದ ಮುಖಾಂತರ ವಿದ್ಯಾರ್ಥಿಗಳಿಗೆ ಅರಿವು, ಜಾಗ್ರತೆ ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಸುಭಾಷ ರತ್ನ, ಅವರು ಆಗಮಿಸಿದರು.
ಕಾರ್ಯಕ್ರಮದ ಸಂಚಾಲನೆ ರಾಘವೇಂದ್ರ ಮುತ್ತಂಗಿ ನೆರವೆರಿಸಿದರು. ತರಬೇತಿ ಅಧಿಕಾರಿ ಪ್ರಶಾಂತ ಜ್ಯಾಂತಿಕರ ಸ್ವಾಗತಿಸಿದರು. ಬಾಬು ಪ್ರಭಾಜಿ ವಂದಿಸಿದರು. ಹಾಗೂ ಕಾಲೇಜಿನ ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ, ಅದಿಕ್ಷಕ ಸುದರ್ಶನಕುಮಾರ ಮಂಗಲಿಕರ, ದಯಾನಂದ ಬೊಂಬಳಗಿ ಹಾಗೂ ಎಲ್ಲಾ ಸಿಬ್ಬಂಧಿಗಳು ವಿದ್ಯಾರ್ಥಿಗಳು ಹಾಜರಿದ್ದರು.