ವಿದ್ಯಾವಂತರಿಂದ ವೃದ್ಧಾಶ್ರಮ ಹೆಚ್ಚಳ : ಇಬ್ರಾಹಂ ಸುತಾರ್

ಸಿಂಧನೂರು.ನ.೧೩ : ಸರ್ವ ಧರ್ಮಗಳ ಶರಣರು, ಸೂಫಿ, ಸಂತರ ಸಂದೇಶಗಳು ಮನುಕುಲ ಉದ್ಧಾರಕ್ಕಾಗಿ ನೀಡುವ ಸಂದೇಶ ಒಂದೇಯಾಗಿದ್ದು. ಎಲ್ಲರು, ಶಾಂತಿ, ಸಹಬಾಳ್ವೆಯಿಂದ ಬದುಕುವುದೆ ಸದ್ಬಾವನಾ ವೇದಿಕೆ ಉದ್ದೇಶವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಇಬ್ರಾಹಂ ಸುತಾರ್ ಅರ್ಥಪೂರ್ಣ ಹಾಗು ಆಕರ್ಷಣೆಯ ಮಾತುಗಳನ್ನಾಡಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಸದ್ಬಾವನಾ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು ಭಾವೈಕ್ಯ ನಾಡಿನಲ್ಲಿ ಕೆಲ ವಿಷಜಂತುಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವುದನ್ನು ತಡೆದು ಎಲ್ಲರು ಸಹೋದರರಂತೆ ಒಂದಾಗಿ ಪ್ರೀತಿಯಿಂದ ಬದುಕುವುದನ್ನು ಕಲ್ಲಿಸುವುದಕ್ಕೆ ಸದ್ಬಾವನಾ ವೇದಿಕೆ ಹುಟ್ಟಿಕೊಂಡಿದ್ದು. ಈ ವೇದಿಕೆ ನಾಡಿನಾದ್ಯಂತ ಹೆಮ್ಮರವಾಗಿ ಬೆಳೆಯಲ್ಲಿ ಎಂದು ಹಾರೈಸಿದರು.
ನಮ್ಮಲ್ಲಿ ನಂಬಿಕೆ ಬದಲು ಅಪನಂಬಿಕೆ ತಪ್ಪು ಕಲ್ಪನೆ ಹೆಚ್ಚಾಗಿದ್ದು ಶ್ರೀಮಂತಿಕೆ ಹೆಚ್ಚಾದರು ಬಡವರು ಕಡಿಮೆಯಾಗಿಲ್ಲ. ಜಗತ್ತಿನಲ್ಲಿ ಬಡಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಂಗಳೂರಿನ ಮಹ್ಮದ್ ಕುಂಇ ಹೇಳಿದರು.
ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರು ಸಹ ತಂದೆ-ತಾಯಿಗಳ ಮೇಲೆ ಪ್ರೀತಿ ಕಡಿಮೆಯಾಗಿ ಪೋಷಕರನ್ನು ಸಾಕದಿರುವುದರಿಂದ ವಿದ್ಯಾವಂತರಿಂದಲ್ಲೆ ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಇದು ನಾಚಿಕೆಗೇಡಿನ ಸಂಗತಿ ಎಂದರು.
ಸದ್ಬಾವನಾ ವೇದಿಕೆ ತಾಲೂಕಾಧ್ಯಕ್ಷ ಡಾ|| ಚನ್ನನಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಜಿ, ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಮರಿಸ್ವಾಮಿ, ನಾಮದೇವ ಗೌಡ, ಚಿದಾನಂದಯ್ಯ ಗುರುವಿನ ತುರುವಿಹಾಳ ಸೇರಿದಂತೆ ಇನ್ನೀತರರು ವೇದಿಕೆ ಮೇಲಿದ್ದರು.