ವಿದ್ಯಾರ್ಥಿ ಹಾಗೂ ಶಿಕ್ಷಕರುಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

ಕಲಬುರಗಿ:ಸೆ.21:ಅಫಜಲಪೂರ ತಾಲೂಕಿನ ಆತನೂರ ಗ್ರಾಮದ ಆರ್.ಎಮ.ಎಸ್.ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಸಂವಾದ ಸಮಸ್ಯೆಗಳು ವಿದ್ಯಾರ್ಥಿ ಹಾಗೂ ಶಿಕ್ಷಕರುಗಳ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಬಿ. ಫೌಜಿಯ್ಯಾ ತರನ್ನುಮ್ ಅವರು ಸ್ಪಂದಿಸಿದರು.
ಗುರುವಾರದಂದು ವಿದ್ಯಾರ್ಥಿಗಳು ಶಾಲಾ ಬಸ್‍ಗಳ ಸಮಸ್ಯೆಗಳು ತಿಳಿಸಿದ್ದಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್‍ಗಳು ನಿಲ್ಲುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ಕಲ್ಪಿಸಬೇಕು ಇಲಾಖೆ ವತಿಯಿಂದ ಏನಾದರೂ ಬೇಡಿಕೆ ಇದ್ದಲ್ಲಿ ಕೂಡಲೆ ಮಾಹಿತಿಯೊಂದಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೊಬ್ಬರ (ಬಿ) ಆತನೂರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಸ್ಪತ್ರೆ ವ್ಯವಸ್ಥೆಯನ್ನು ಕೇಳಿ ತಿಳಿದುಕೊಂಡು ಒಳ್ಳೆಯ ಸೇವೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಗೊಬ್ಬುರ ಪಶು ಚಿಕಿತ್ಸಾಲಯ ಭೇಟಿ ನೀಡಿ ಪರಿಶೀಲಿಸಿ ರೈತರೊಂದಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಗೊಬ್ಬುರ (ಬಿ) ಸರಕಾರಿ ಶಾಲೆ ಮಕ್ಕಳೊಂದಿಗೆ ಜತೆ ಮಾತನಾಡಿ ಮಕ್ಕಳಿಗೆ ಗುಣಾತ್ಮಕ ಕಲಿಕೆ ಬಿಸಿಯೂಟದ ಕೋಣೆಗೆ ಭೇಟಿ ನೀಡಿದ್ದಾಗ ಆಹಾರ ಗುಣಮದ್ದಾಗಿರಬೇಕು ಮಕ್ಕಳಿಗೆ ಪರಿಶೀಲಿಸಿ ಆಹಾರ ನೀಡಲು ಕ್ರಮಕೈಗೊಳಬೇಕೆಂದರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೌಡಪೂರ ಕಬ್ಬು ಬರಗಾಲದಿಂದ ಬೆಳೆ ಹಾನಿ ಆದ ಕಬ್ಬು ತೊಗರಿ ಹತ್ತಿ ಜಮೀನಿಗಳನ್ನು ಹಾನಿಗೊಳದ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಆತನೂರ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಅಲಿಸಿದರು ನಾಡಕಚೇರಿ, ಆತನೂರು ಸರ್ಕಾರಿ ಮತಗಟ್ಟೆಗಳನ್ನು ಪರಿಶೀಲಿಸಿದರು. ರೋಗಿಗಳೊಂದಿಗೆ ಚರ್ಚೆ ಮಾಡಿ ಆಸ್ಪತ್ರೆ ವೈದ್ಯಕೀಯ ಸೇವೆ ಕುರಿತು ಹಾಜರಿದ್ದ ತಾಲೂಕು ಆರೋಗ್ಯ ಕೇಂದ್ರ ಭೇಟಿ ನೀಡಿ ಸಭೆ ನಡೆಸಿದರು.
ಪುರಸಭೆ ರಸ್ತೆ ಅಗಲೀಕರಣ ಒಳಚರಂಡಿ ಟಿಂಡರದಾರನಿಗೆ ಆದಷ್ಟು ಬೇಗ ಕಾಮಗಾರಿಗಳು ಮುಗಿಸಲು ಸೂಚನೆ ನೀಡಿದರು. ಸೊನ್ನ ಬ್ರೀಡ್ಜ್ ಕಂ ಬ್ಯಾರೇಜ್ ಭೇಟಿ ನೀಡಿದರು. ಅಫಜಲಪೂರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ನೀರಿನ ಸಮಸ್ಯೆಗಳಿದ್ದರೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು ತಹತಹಶೀಲ್ದಾರ ಕಚೇರಿ ನಾಡ ಕಚೇರಿ ತಾಲೂಕ ಕಚೇರಿಗಳ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಅಫಜಲಫೂರ ತಾಲೂಕಿನ ತಹಶೀಲ್ದಾರ ಸಂಜೀಕುಮಾರ ದಾಸರ, ಕಂದಾಯ ಇಲಾಖೆ, ಶಾಲಾ ಶಿಕ್ಷ್ಷಣಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪಾನ ಇಲಾಖೆ ಅಧಿಕಾರಿಗಳು ತಾಲೂಕ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.