ವಿದ್ಯಾರ್ಥಿ ಸಾಧನೆಗೆ ಅಭಿನಂದಿಸಿದ ಕೆ.ಎಚ್ ಮುನಿಯಪ್ಪ

ಕೋಲಾರ,ಮೇ.೨೫- ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟುವ ಕಡೆ ಗಮನ ಹರಿಸಬೇಕೆಂದು ಮಾನ್ಯ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್ ಮುನಿಯಪ್ಪ ಅಭಿಪ್ರಾಯ ಪಟ್ಟರು
ನಗರದ ಕುರುಬರು ಪೇಟೆಯ ನಗರಸಭಾ ಸದಸ್ಯ ಪ್ರಸಾದ್ ಬಾಬು ಅವರ ಮನೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕೆ,ಎಸ್,ಆರ್,ಟಿ,ಸಿ,ಯ ಶಿವುಕುಮಾರ್.ಡಿ. ಹಾಗೂ ಎನ್ ಮಂಜುಳ ಅವರ ಪುತ್ರಿಯಾದ ಹರಿಪ್ರಿಯ ಕೆ.ಎಸ್ ಅವರನ್ನು ಸನ್ಮಾನಿಸಿ ಮಾತಾನಾಡುತ್ತಿದ್ದರು.
ಕಲಿಕೆ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಯಾವುದಾದರಲ್ಲಿ ಕೂಡ ನಾವು ಪ್ರತಿಭಾ ವಂತರಾದರೇ ನಮ್ಮನ್ನು ಹೊತ್ತು ಮೆರವಣಿಗೆ ಮಾಡುವ ವಿವಿಧ ಸಂಸ್ಥೆ ಗಳು ಈ ಸಮಾಜದಲ್ಲಿವೆ. ಸಂಘಟನೆಯ ಆರಂಭ ಮಾಡುವುದು ಸುಲಭ ಅದನ್ನು ಮುನ್ನೆಡೆಸಿಕೊಂಡು ಹೋಗುವುದು ಬಹಳ ಕಠಿಣ. ಇಂತಹ ದುರ್ಗಮ ಪರಿಸ್ಥಿತಿಯಲ್ಲೂ ಕೂಡ ಈ ಕಾರ್ಯ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿ ಹರಿಪ್ರಿಯ ಮಾತಾನಾಡಿ ಅತಿ ಹೆಚ್ಚು ಅಂಕಗಳನ್ನು ಗಳಿಸಲು ಪರಿಶ್ರಮ ಅತ್ಯವಶ್ಯಕ. ನನ್ನ ಹಗಲಿರುಳಿನ ಪರಿಶ್ರಮಕ್ಕೆ ಪ್ರತಿಫಲ ದೊರಕಿದೆ. ಇದರ ಹಿಂದೆ ನಮ್ಮ ತಂದೆತಾಯಿಗಳ ಆಶೀರ್ವಾದ ಇದೆ ಎಂದು ಹೇಳುತ್ತಾ ಜೀವನದಲ್ಲಿ ನನ್ನದೊಂದು ಗುರಿ ಇದೆ. ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿ ಆಗಬೇಕೆಂಬ ಮಹತ್ವಾಕಾಂಕ್ಷೆ ಇದೆ. ಅದರ ನೆರಳಲ್ಲಿ ನಾನು ವಿದ್ಯಾಭ್ಯಾಸ ಮುಂದುವರೆಸುತ್ತೇನೆ ಎಂದರು
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಪ್ರಸಾದ್ ಬಾಬು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್ ಎ ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಕೆ.ಜಯದೇವ, ನಾಗರಾಜ್, ಕಿಟ್ಟಣ್ಣ, ಚಂದ್ರಣ್ಣ, ಪತ್ರಕರ್ತ ಕೆ.ಎಸ್ ಗಣೇಶ್, ನಿವೃತ್ತ ಪೋಲಿಸ್ ಅಧಿಕಾರಿ ರವೀಂದ್ರನಾಥ, ಜಯಕರ್ನಾಟಕದ ಅಧ್ಯಕ್ಷ ತ್ಯಾಗರಾಜ್, ಎ.ಇ,ಎಸ್ ಶಾಲೆಯ ಅಧ್ಯಕ್ಷ ಪಾಲ್ಗುಣ, ಪೋಲಿಸ್ ಅಶ್ವಥ್,ಶಬರಿ, ಸಂತೋಷ್, ಸಂತು, ಪಿ,ನಾರಾಯಣಪ್ಪ, ಪ್ರಕಾಶ್, ರಾಜೇಶ್ವರಿ, ವಕೀಲ ಹರೀಶ್, ಪ್ರೀತಂ ಮುಂತಾದವರು ಉಪಸ್ಥಿತರಿದ್ದರು.