ಕನಕಪುರ, ಜು. ೩೧: ನಗರದ ಆರ್.ಇ.ಎಸ್. ವಿದ್ಯಾಸಂಸ್ಥೆಗೆ ಸೇರಿದಆರ್.ಎಂ.ಪಿ.ಹೆಚ್.ಎಸ್. ಶಾಲೆಯ ೨೦೨೩ನೇ ಸಾಲಿನ ಶೈಕ್ಷಣೀಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಆರ್.ಇ.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಕೆ. ಶ್ರೀಕಂಠು ರವರ ಅದ್ಯಕ್ಷತೆಯಲ್ಲಿ ಶಾಲೆಯಲ್ಲಿ ಓದಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡ ಲಾಯಿತು.
ಸಂಸ್ಥೆಯಅಧ್ಯಕ್ಷರಾದ ಹೆಚ್.ಕೆ. ಶ್ರೀಕಂಠುರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿಆರ್.ಎಂ.ಪಿ.ಹೆಚ್.ಎಸ್.ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ನಗರದ ಹೆಸರಾಂತ ಸ್ತ್ರೀ ರೋಗತಜ್ಞರಾದಡಾ. ಉಮಾದೇವಿ, ನಿವೃತ್ತ ಅಸಿಸ್ಟೆಂಟ್ ಕಮಿಷನರ್ ದಿವಂಗ ಎಸ್.ನಾಗರಾಜು, ಸಮಾಜ ಸೇವಕರಾದ ಎ.ಪಿ.ಕೃಷ್ಣಪ್ಪ, ಹತ್ರಿ ಶಾಲೆಯ ಹಿರಿಯ ವಿದ್ಯಾರ್ಥಿಜಗದೀಶ್‌ಚಂದ್ರು, ಶಾಲೆಯ ಹಿರಿಯ ವಿದ್ಯಾರ್ಥಿಎಸ್. ರಾಮಸಂಜೀವಯ್ಯ, ಡಾ. ಸಂತೋಷ್, ವಿ.ಆರ್. ನಿವೃತ್ತ ಶಿಕ್ಷಕರಾದ ಆರ್.ವಿ.ನಾರಾಯಣ್, ಶಾಲೆಯ ಸಹ ಶಿಕ್ಷಕರುಗಳಾದ ಟಿ. ಗುರುಮೂರ್ತಿ, ಜಿ.ಎಸ್. ನಾಗರಾಜು, ಟಿ.ವಿ.ಎನ್. ಪ್ರಸಾದ್, ವಿ.ತಿಮ್ಮೇಗೌಡ, ರವರುಗಳು ಆರ್.ಎಂ.ಪಿ.ಹೆಚ್. ಎಸ್. ಶಾಲೆ ಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಕೆ.ಶ್ರೀಕಂಠು, ಕಾರ್‍ಯದರ್ಶಿ ಪುಟ್ಟ ಸ್ವಾಮಿ, ಜಂಟಿಕಾರ್ಯದರ್ಶಿ ಸೂರ್‍ಯ ನಾರಾಯಣಗೌಡ, ಖಜಾಂಚಿ ಸಿ.ಎಸ್.ಮಂಜುನಾಥ್, ನಿರ್ದೇಶಕರಾದ ಕೆ.ಬಿ.ನಾಗರಾಜು, ಹಾಗೂ ಕಾರ್‍ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಪ್ರೋತ್ಸಾಹದನ ವಿತರಣೆ ಮಾಡಿದರು.