ವಿದ್ಯಾರ್ಥಿ ಶಕ್ತಿ ಇದು ಅಣುಶಕ್ತಿ ಇದ್ದಂತೆ…. 

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನುಡಿ ಮುತ್ತಿನoತೆ  ಇಂದಿನ ವಿದ್ಯಾರ್ಥಿಗಳು ಇಲ್ಲವೆಂಬುದು ವಾಸ್ತವ ಸಂಗತಿಯಾಗಿದೆ.     ಇಂದು ವಿದ್ಯಾರ್ಥಿಗಳು ತಮ್ಮ ಜೀವನದ ಮಹತ್ವದ ಕ್ಷಣಗಳನ್ನು ಕಲಿಕೆಯಲ್ಲಿ ವ್ಯಯಮಾಡದೆ ಅದಕ್ಕೆ ಸರಿಯಾದ ಪ್ರತಿಫಲ ಅಪೇಕ್ಷೆ ಮಾತ್ರ ಮಾಡಿಕೊಂಡು ಅದು ಸಿಗಲಿಲ್ಲ ಎಂದು   ಕೊರಗಿ ಜೀವನದಲ್ಲಿ ವಿಫಲನಾಗುತ್ತಾ ಬರುತ್ತಿದ್ದಾರೆ. ಇಂದು ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಈ ಬಂಗಾರದ ಜೀವನದ ಬಗ್ಗೆ ಜಾಗೃತೆ ವಹಿಸುವುದು ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ.  ಅಂದರೆ ಬಂಗಾರ ಅಥವಾ ಒಡವೆ ಎಂಬ ವಸ್ತು ನೋಡಲು ಸುಂದರ ಅಂದ ಆಡಂಬರದ ಸಂಕೇತ ಮತ್ತು ಘನತೆಯ ಪ್ರತಿರೂಪ ವಾದುದು. ಆದರೆ ಅದರ ಮೂಲ ಮಾತ್ರ ವಿದ್ಯಾರ್ಥಿಗಳು ತಿಳಿದುಕೊಳ್ಳುವಲ್ಲಿ ಪ್ರಯತ್ನ ಪಡುತ್ತಿಲ್ಲ. ಬಂಗಾರವಾಗಬೇಕಾದರೆ ಅದು    ಬೆಂಕಿಯ ಜ್ವಾಲೆ ಅಕ್ಕಸಾಲಿಗನ ಏಟು ತಾಪದ ಬಿಸಿ ಮತ್ತು ಸೂರ್ಯನ ಪ್ರಕಾಶಕ್ಕೆ ಒಗ್ಗಿ ನಡೆದರೆ ಮಾತ್ರ ಎಲ್ಲೋ ಭೂಗರ್ಭದಲ್ಲಿ ದೊರೆತ ಕರಿ ತುಣುಕು ಪ್ರಪಂಚವನ್ನೇ ಆಳುವ ಅರಸನ ತಲೆಯ ಮೇಲೆ ಕಿರೀಟವಾಗಿ ಪ್ರಜ್ವಲಿಸುತ್ತದೆ.ಮೇಲಿನ ವಾಕ್ಯಕ್ಕೆ  ವಿದ್ಯಾರ್ಥಿಗಳನ್ನು ಉದಾಹರಣೆಗೆ ತೆಗೆದುಕೊಂಡರೆ ವಿದ್ಯಾರ್ಥಿಗಳು ತನ್ನ ವಿದ್ಯಾಭ್ಯಾಸದಲ್ಲಿ  ಕಷ್ಟ ಇಷ್ಟಗಳ ಸರಿಯಾದ ಮಿಶ್ರಣವನ್ನು ತೂಗಿಸಿಕೊಂಡು ಹೋಗದೆ ಹೋದರೆ  ಅವನು ಮಣ್ಣಲ್ಲಿ ಮಣ್ಣಾಗಿಯೇ  ಇೆರುತ್ತಾನೆ. 

ತನಗಾಗುವ ನೋವು ಬೇಡ ಬರೀ ಇಷ್ಟಗಳು  ಬೇಕೆಂದರೆ  ಎಂದಿಗೂ ತನ್ನ ಇಷ್ಟ ಗಳಿಗಾಗಿ ಹೊರಡುತ್ತ ಇರುತ್ತಾನೆ ಬಂಗಾರವಾಗಲು ಸಾಧ್ಯವೇ ಇಲ್ಲ.

ಅಂತೆಯೇ ವಿದ್ಯಾರ್ಥಿ ಎಂಬ ಕಲ್ಪನೆಗೆ ಮೂಲ ಕಾರಣವಾದ ವಿದ್ಯಾಲಯಗಳು ಕೂಡ ವಿದ್ಯಾರ್ಥಿಯ ಪ್ರಾಪಂಚಿಕ ಬೌದ್ಧಿಕ ಶಾರೀರಿಕ ಮತ್ತು ಮಾನಸಿಕ ಪರಿಸ್ಥಿತಿಗೆ ಸರಿಯಾದ  ಕಾವನ್ನು  ನೀಡಿ ಅವರನ್ನು ಕಾಯಬೇಕು ಇದರಿಂದ ಸ್ವಸ್ಥ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗ ಕೊಡುಗೆಯನ್ನು ನೀಡಿದಂತಾಗುತ್ತದೆ. 

ವಿದ್ಯಾರ್ಥಿ ಜೀವನದಲ್ಲಿ ಪ್ರೌಢಾವಸ್ಥೆ ತುಂಬಾ ಮುಖ್ಯವಾದ ಹಂತ ಅಂದರೆ 13ರಿಂದ 19 ರ ವಯೋಮಿತಿಯಲ್ಲಿ ಬೌದ್ಧಿಕವಾಗಿ ಬೆಳೆಯುವ ಹಂತ. ಈ ವ್ಯವಸ್ಥೆಯಲ್ಲಿ ಪೋಷಕರು ತುಂಬಾನೇ ಕಾಳಜಿವಹಿಸಬೇಕಾಗುತ್ತದೆ ಅವರು ಮುಂದಿನ ಜೀವನದಲ್ಲಿ ಅಡ್ಡಾದಿಡ್ಡಿಯಾಗಿ ಹೇಗೆ ಬೇಕೋ ಹಾಗೆ ಬೆಳೆಯಲು ಕೆಲ ಸಮಯದಲ್ಲಿ ಪೋಷಕರೇ ಸಹಾಯ ಮಾಡುವಂತಾಗುತ್ತದೆ.

ವಿದ್ಯಾರ್ಥಿಗಳಿಗೆ ಮೊಬೈಲ್ ಗಳನ್ನು ಕೊಡಸೋದು ಕೈತುಂಬಾ ಹಣವನ್ನು ಕೊಡುವುದು ಮತ್ತು ಶಿಕ್ಷಣದ ಬಗ್ಗೆ  ಸರಿಯಾದ ಕಾಳಜಿ ವಹಿಸದೇ ಇರುವುದು ಕಾರಣವಾಗುತ್ತದೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ ಅವರ ಬುದ್ಧಿಮತ್ತೆ ಮೆದುಳಿನ ಕಾರ್ಯವೈಖರಿಯ ಅದರ ದಿಕ್ಕನ್ನೇ ಬದಲಿಸಬಲ್ಲ ಅಂತಹ ಸಮಯವಾಗಿರುತ್ತದೆ ಈ ಸಂದರ್ಭದಲ್ಲಿ ಉತ್ತಮವಾದ ಒಳ್ಳೆಯ ಗುರಿಯೆಡೆಗೆ ಅವರನ್ನು ಎಳೆದೊಯ್ದರೆ ಮುಂದೆ ಉತ್ತಮರಾಗಿ ಬದುಕಲು ಸಾಧ್ಯವಾಗುತ್ತದೆ. 

ಮೊಬೈಲ್ ಇದು ಪ್ರಪಂಚವನ್ನೇ ಬದಲಿಸುವ ಶಕ್ತಿ ಇರ್ತಕ್ಕಂತ 1ಚಮತ್ಕಾರಿ ವಸ್ತು ಅಂಗೈಯಲ್ಲಿ ಇಡೀ ಪ್ರಪಂಚವನ್ನು ಕಾಣುವ ಕಲ್ಪನೆಯನ್ನು ನಾವು ಮೊಬೈಲ್ ನಿಂದಲೇ ಕಲಿತಿರುವುದು. ಇದರೊಂದಿಗೆ ಅಂತರ್ಜಾಲವೆಂಬ ಮಾರ್ಜಾಲವು ಕೂಡ ಅದಕ್ಕೆ ಪೂರಕ ಕೆಲಸವನ್ನು ಮಾಡುತ್ತದೆ ಇದು ಯಾರನ್ನು ಬೇಕಾದರೂ ಯಾವುದನ್ನು ಬೇಕಾದರೂ ತನ್ನ ಹತೋಟಿಗೆ ಪಡೆಯುವ ಬೃಹತ್ ಮಾಯಾಶಕ್ತಿಯನ್ನು ಹೊಂದಿದೆ.   ಈ ಅಂತರ್ ಜಾಲದ ಬಲೆಗೆ ಬಿದ್ದ ವಿದ್ಯಾರ್ಥಿ ಸಮೂಹ ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ.  ಇದರಿಂದ ಕೆಟ್ಟ ದಾರಿಯಲ್ಲಿ ಸಾಗುವ ಸಾಧ್ಯತೆ ಹೆಚ್ಚಾಗುತ್ತದೆ. 

ತಂದೆ ತಾಯಿ ಗುರು ಶಾಲೆ ಆಟ ಪಾಠ ಮುಂತಾದ ಸಮೃದ್ಧ ಪೋಷಕ ಗಳಿಂದ ತುಂಬಿ ಬೆಳೆಯಬೇಕಾದ ವಿದ್ಯಾರ್ಥಿ ಜೀವನ ಇಂದು ತಾನು ಯಾವ ದಾರಿಗೆ ಸಾಗುತ್ತಿರುವುನೊ ಆ ದಾರಿ ಸರಿಯೇ ತಪ್ಪೇ ಎಂಬ ಅರಿವು ಅವರಿಗೆ ತಿಳಿಯುವ ಮೊದಲೇ ಮಾದಕ ವಸ್ತುಗಳು ಅಶ್ಲೀಲ ಚಿತ್ರಗಳು ಅನೈತಿಕ ಚಿತ್ರಗಳು ಭೂಗತಲೋಕ ಕೊಲೆ ದರೋಡೆ ಇಂತಹ ಕೆಟ್ಟ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುವ  ಸಂದರ್ಭಗಳು ಹೆಚ್ಚಾಗುತ್ತಿವೆ. 

ಭಾರತ ದೇಶ ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ದೇಶ ಅದರ ಸ್ಥಿತಿ ಇಂದು ಪ್ರೌಢ ವಯಸ್ಸಿನ ಯುವ ಜನತೆಯ ಹಾಗೆ  ಆಗಿದೆ.  ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶವು ಪ್ರಪಂಚದ ಬಲಿಷ್ಠ ಯುವ ಪಡೆ ಹೊಂದಿದ ದೇಶವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. 

ಕೊನೆಯದಾಗಿ ವಿದ್ಯಾರ್ಥಿ ಶಕ್ತಿ ಇದು ಅಣುಶಕ್ತಿ ಇದ್ದಂತೆ ಅದರ ಸದುಪಯೋಗವಾದರೆ ನೂರಾರು ಜೀವಗಳಿಗೆ ಬೆಳಕು ನೀಡಿ ಅವರ ಬಾಳನ್ನು ಬೆಳಗುವ ಕಾರ್ಯ ವಾಗಬಹುದು ಅದರಲ್ಲಿ ಕೊಂಚ ಎಡವಿದರೂ ಅಥವಾ ಹತೋಟಿಯನ್ನು ತಪ್ಪಿದರೂ ಮುಂದೊಂದು ದಿನ ಹಿರೋಶಿಮಾ ಮತ್ತು ನಾಗಸಾಕಿಯ ಪುನರುಚ್ಚಾರದ ಕಡೆಗೆ ಭಾರತವನ್ನು ಕರೆದೊಯ್ಯುವ ಕಾಲ ಬರಬಹುದು ಆದ್ದರಿಂದ  ಉತ್ತಮ  ವಿದ್ಯಾರ್ಥಿಗಳು ಸೃಷ್ಟಿಸುವ     ಜವಾಬ್ದಾರಿ ಎಲ್ಲ ಪೋಷಕರದು ಗುರುಗಳದ್ದು ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ದೇಶವನ್ನು ರಾಜ್ಯವನ್ನು ಆಳುವಂತ ಸರ್ಕಾರದ ಮೇಲೆ ಇದೆ. ಎಲ್ಲಾ ಜವಾಬ್ದಾರಿಯುತರೂ ಜವಾಬ್ದಾರಿಯಿಂದ ವಿದ್ಯಾರ್ಥಿ  ಪಡೆಯನ್ನು  ಉತ್ತಮ ದಾರಿಗೆ ಕೊಂಡೊಯ್ಯುವ ಪ್ರಯತ್ನ ಮಾಡೋಣ.ಇಂದಿನ  ಉತ್ತಮ ವಿದ್ಯಾರ್ಥಿಗಳು ಮುಂದಿನ ಉತ್ತಮ ನಾಯಕರು.