ವಿದ್ಯಾರ್ಥಿ ವೇತನ ವಿತರಣೆ

ಹುಬ್ಬಳ್ಳಿ,ಸೆ.14: ಬಡತನ ಶಾಪವಲ್ಲ, ಏಕೆಂದರೆ ಅದು ಹಲವು ಅವಕಾಶಗಳನ್ನು ಒದಗಿಸುತ್ತದೆ. ಕುಟುಂಬದ ಆರ್ಥಿಕತೆಯು ವಿದ್ಯಾರ್ಥಿಯ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗಬಾರದು,' ಎಂದು ನಿವೃತ್ ಶಿಕ್ಷಕ ಮತ್ತು ಮಹಾಗುರು ಎಜುಕೇಶನಲ್ ಟ್ರಸ್ಟ್‍ನ ಕೇಂದ್ರ ಬಿಂದುವಾದ ಚಕ್ರವರ್ತಿ ಶ್ರೀಧರ್ ಹೇಳಿದರು. ನಗರದ ಕೆಎಲ್‍ಇ ಬಿವಿಬಿಯ ಬಯೋಟೆಕ್ ಹಾಲ್‍ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾಗುರು ಎಜುಕೇಶನಲ್ ಟ್ರಸ್ಟ್‍ನ 16ನೇ ವಾರ್ಷಿಕೋತ್ಸವ ಮತ್ತು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ವಿದ್ಯಾರ್ಥಿಗಳು ಪ್ರತಿ ವರ್ಷ ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ಹೆಮ್ಮೆ ಅನ್ನಿಸುತ್ತಿದೆ. ಬೇರೆಯವರಿಗೆ ಸಹಾಯವನ್ನು ನಿಸ್ವಾರ್ಥತೆಯಿಂದ ಮಾಡಬೇಕು, ಎಂದರು.
`ಈ ವರ್ಷ ನಮ್ಮ ವಿದ್ಯಾರ್ಥಿಗಳು ತಾವು ದುಡಿದು ಗಳಿಸಿದ ಹಣದಲ್ಲಿ 14 ಲಕ್ಷ ರೂಗಳನ್ನು ಟ್ರಸ್ಟ್‍ನ ಮೂಲಕ 77 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ವಿತರಿಸುತ್ತಿರುವುದು ಬಹಳ ಸಂತೋಷ ತರುತ್ತದೆ,’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರಶಾಂತ ಆಡುರ ಅವರು ಮಾತನಾಡಿ, `ಶ್ರೀಧರ್ ಚರ್ಕವರ್ತಿ ಅವರ ಶಿಷ್ಯರ ಬಳಗವು ಪ್ರತಿ ವರ್ಷ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿರುವುದು, ಸ್ಮರಣೀಯ.

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ, ಮುಖ್ಯಸ್ಥೆ ವೈಷ್ಣವಿ ಹಾನಗಲ್ ಮಾತನಾಡಿ, ಶ್ರೀಧರ್ ಚರ್ಕವರ್ತಿಯವರ ಶಿಷ್ಯರ ಬಳಗ ಬಹಳ ಅಚ್ಚುಕಟ್ಟಾಗಿ ಟ್ರಸ್ಟ್‍ನ್ನು ಮುನ್ನಡೆಸಿಕೊಂಡು ಹೊರಟಿರುವುದು ಶ್ಲಾಘನೀಯ,' ಎಂದರು. ಟ್ರಸ್ಟ್‍ನ ಅದ್ಯಕ್ಷÀ ಮಹೇಶ್ ಪಾಟೀಲ್ ಅವರು ಮಾತನಾಡಿ,ಕಳೆದ 16 ವರ್ಷಗಳಿಂದ ಟ್ರಸ್ಟ್ ಅತ್ಯುತ್ತಮವಾಗಿ ನಡೆದುಕೊಂಡು ಬಂದಿದೆ. ಇಲ್ಲಿಯವರೆಗೆ ಟ್ರಸ್ಟ್ ಒಟ್ಟಾರೆಯಾಗಿ 1.06 ಕೋಟಿಯ?À್ಟು ವಿದ್ಯಾರ್ಥಿ ವೇತನ ವಿತರಿಸಿದೆ,’ ಎಂದರು
`ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಬೋಧಿಸಿದ ಶ್ರೀಧರ್ ಚರ್ಕವರ್ತಿ ಅವರು ಕಳೆದ 24 ವರ್ಷಗಳ ಅವರ ಸೇವೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿಗಳ ಸಲುವಾಗಿ ಅವಿವಾಹಿತರಾಗಿ ಜೀವನವನ್ನು ತ್ಯಾಗ ಮಾಡಿದ್ದಾರೆ,’ ಎಂದರು.