ವಿದ್ಯಾರ್ಥಿ ವೇತನ ಪ್ರಯೋಜನ ಪಡೆಯಿರಿ

ಬೀದರ್: ಜ.18:ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಎಂಟನೇ ತರಗತಿ ವಿದ್ಯಾರ್ಥಿಗಳು ರಾಷ್ಟ್ರೀಯ ಮೆರಿಟ್ ಕಂ ಮೀನ್ಸ್ ಸ್ಕಾಲರ್‍ಶಿಪ್ (ಎನ್‍ಎಂಎಂಎಸ್) ಪ್ರಯೋಜನ ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಂಯೋಜಕ ಸಚ್ಚಿದಾನಂದ ಹೇಳಿದರು.

ನಿರಂಜನ್ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಸ್ಪರ್ಧಾಗುರು ಐಎಎಸ್ ಆ್ಯಂಡ್ ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ಇಲ್ಲಿಯ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಮೆರಿಟ್ ಕಂ ಮೀನ್ಸ್ ಸ್ಕಾಲರ್‍ಶಿಪ್ ಪರೀಕ್ಷೆಯ ಉಚಿತ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಸರ್ಕಾರದಿಂದ ನಾಲ್ಕು ವರ್ಷಗಳ ವರೆಗೆ ವಾರ್ಷಿಕ ತಲಾ ರೂ. 12 ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆಯ ವಿದ್ಯಾರ್ಥಿಗಳಿಗೆ ನೆರವಾಗಲು ಜ. 21 ರ ವರೆಗೆ ಎನ್‍ಎಂಎಂಎಸ್ ಪರೀಕ್ಷೆಯ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನಿರಂಜನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಮೀತ್ ಸೋಲಪುರ ಹೇಳಿದರು.

ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಮಾಣಿಕರಾವ್ ಬಿ. ಪಾಂಚಾಳ್, ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ್ ಕುಲಕರ್ಣಿ, ಸತ್ಯವಾನ್ ಭೋಸ್ಲೆ, ಶರಣಪ್ಪ ಸಾಗರ್, ಮಹಾನಂದ, ರಮೇಶ ಮರ್ಜಾಪುರ ಉಪಸ್ಥಿತರಿದ್ದರು.

ನಾಗನಾಥ ಬಿರಾದಾರ ನಿರೂಪಿಸಿದರು. ಮುರಾರಿ ಜಾಧವ್ ವಂದಿಸಿದರು.