ವಿದ್ಯಾರ್ಥಿ ವೇತನ ಪರೀಕ್ಷೆ ಫಲಿತಾಂಶ ಪ್ರಕಟ ಶಾಹೀನ್‍ನಿಂದ 6,070 ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ವೇತನ’

ಬೀದರ್: ಜ.25:ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು 2024-2026ರ ಶೈಕ್ಷಣಿಕ ವರ್ಷಗಳಿಗೆ ಒಟ್ಟು 6,070 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಕಟಿಸಿದೆ.
ವಿದ್ಯಾರ್ಥಿ ವೇತನಕ್ಕೆ ಡಿಸೆಂಬರ್‍ನಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ಅಧಿಕೃತವಾಗಿ ಘೋಷಿಸಿದೆ.
ಸಂಸ್ಥೆ ಪ್ರಕಟಿಸಿದ ವಿದ್ಯಾರ್ಥಿ ವೇತನದ ಒಟ್ಟು ಮೊತ್ತ ರೂ. 10.48 ಕೋಟಿ ಆಗಿದೆ. ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಿನ್ನ ವಿಭಾಗಗಳಲ್ಲಿ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ತಲಾ ರೂ. 3.10 ಲಕ್ಷದ ಮೊದಲ ವರ್ಗದ ವಿದ್ಯಾರ್ಥಿ ವೇತನಕ್ಕೆ 28 ವಿದ್ಯಾರ್ಥಿಗಳು, ತಲಾ ರೂ. 1.50 ಲಕ್ಷದ ಎರಡನೇ ವರ್ಗದ ವಿದ್ಯಾರ್ಥಿ ವೇತನಕ್ಕೆ 50, ತಲಾ ರೂ. 75 ಸಾವಿರದ ಮೂರನೇ ವರ್ಗದ ವಿದ್ಯಾರ್ಥಿ ವೇತನಕ್ಕೆ 78 ಹಾಗೂ ತಲಾ ರೂ. 14 ಸಾವಿರದ ವಿದ್ಯಾರ್ಥಿ ವೇತನಕ್ಕೆ 5,914 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ನೀಡುವ ಬಹುಮಾನವಾಗಿದೆ. ಆರ್ಥಿಕ ಬೆಂಬಲದೊಂದಿಗೆ ಉನ್ನತ ಶಿಕ್ಷಣ ಮುಂದುವರಿಕೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಥಿ ವೇತನ ಅನೇಕ ವಿದ್ಯಾರ್ಥಿಗಳು ಹಾಗೂ ಕುಟುಂಬಗಳ ಆರ್ಥಿಕ ಹೊರೆ ನಿವಾರಿಸಲಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶಾಹೀನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ವೆಬ್‍ಸೈಟ್ www.shaheengroup.org http://www.shaheengroup.org/ ಗೆ ಭೇಟಿ ನೀಡುವ ಮೂಲಕ ಅಥವಾ ವ್ಯಾಟ್ಸ್‍ಆ್ಯಪ್ ಚಾನೆಲ್ https://whatsapp.com/channel/0029Va9cGRa7IUYQA5aSjt12
ಮೂಲಕ ಫಲಿತಾಂಶ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.