ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸೈಬರ್ ಸೆಕ್ಯೂರಿಟಿ ಜಾಗೃತಿ

ಕಲಬುರಗಿ,ಸೆ.25: ಜೇವರ್ಗಿ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನಾಲಜೀಸ್ ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸೈಬರ್ ಸೆಕ್ಯೂರಿಟಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಇತ್ತೀಚಿಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಈ ಕುರಿತು ಸೈಬರ್ ಸುರಕ್ಷತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮತ್ತು ಮೊಬೈಲ್ ನ ಅಸುರಕ್ಷಿತ ಬಳಕೆಯಿಂದಾಗಿ ಅದೆಷ್ಟೋ ಮುಗ್ಧ ಜನರು, ವಿದ್ಯಾವಂತರು ಸಹ ಮೋಸ ಜಾಲಕ್ಕೆ ಗುರಿಯಾಗುತ್ತಿದ್ದಾರೆ. ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೊಬೈಲ್ ಬಳಕೆ ಅವಶ್ಯವೇನಿಸಿದೆ. ಕೆಲವರಂತೂ ಮೊಬೈಲ್ ನ ಅತಿಯಾದ ಬಳಕೆಯಿಂದಾಗಿ ದಾಸರಾಗುತ್ತಿರುವುದು ವಿಷಾದನೀಯ ಎನಿಸಿದೆ. ಈ ಮೊಬೈಲ್ ನ ಅತಿಯಾದ ಬಳಕೆಯಿಂದಾಗಿ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಹಾಗೂ ಬೌದ್ಧಿಕ ಶಕ್ತಿ ಅಭಿವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಮಕ್ಕಳು ಹೊಸ ಹೊಸ ಮೊಬೈಲ್ ಆಪ್ ಮುಖಾಂತರ ವಿಡಿಯೋ ಗೇಮ್, ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಸ್, ಡೌನ್ಲೋಡ್ ಮಾಡಿಕೊಂಡು ದಿನ ಪೂರ್ತಿ ಇದರಲ್ಲೇ ಮಗ್ನರಾಗಿರುವುದು ತುಂಬಾ ನೋವಿನ ಸಂಗತಿ. ಇದರಿಂದಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಿರುವುದರಷ್ಟೇ ಅಲ್ಲ ಅನೇಕ ಮಾನಸಿಕ ಕಾಯಿಲೆಗಳಿಂದ ಎಳೆಯ ವಯಸ್ಸಿನಲ್ಲಿಯೇ ತುತ್ತಾಗುತ್ತಿದ್ದಾರೆ. ಆದ್ದರಿಂದ ಅವಶ್ಯವೆನಿಸಿದಾಗ ಪೋಷಕರು ಅಥವಾ ಹಿರಿಯರ ಸಮ್ಮುಖದಲ್ಲಿ ಮಾತ್ರ ಮೊಬೈಲ್ ಬಳಸಬೇಕು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಜಾತಾ ರೆಡ್ಡಿ ಮಾತನಾಡಿ ಮೊಬೈಲ್ನ ಸರಿಯಾದ ಬಳಕೆ ಪಾಸ್ವರ್ಡ್ ಗಳನ್ನು ಸೂಕ್ತ ರೀತಿಯಲ್ಲಿ ಬಳಸುವುದು, ಆಗಾಗ ನಿಮ್ಮ ಪಾಸ್ವರ್ಡ್ ಗಳನ್ನು ಬದಲಾಯಿಸುವುದು, ಅಭ್ಯಾಸವನ್ನು ಬೆಳೆಸುವ ಮೂಲಕ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು. . ಮಕ್ಕಳು ಆಟ ಆಡುವ ಆಪ್ ಬಳಸಿ ಮೋಸ ಹೋಗುತ್ತಿದ್ದಾರೆ ಆದ್ದರಿಂದ ಯಾವುದೇ ಆ್ಯಪ್ಗಳನ್ನು ಪರಿಚಯ ಇಲ್ಲದವರ ಜೊತೆ ಹಂಚಿಕೊಳ್ಳಬಾರದೆಂದು ಮಕ್ಕಳಿಗೆ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜಿಸ್ ಸಂಯೋಜಕರಾದ ದಯಾನಂದ್ ಸಾವಳಕರ್ ಅವರು ಸೈಬರ್ ಸುರಕ್ಷತಾ ನಿಯಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸೈಬರ್ ಸೆಕ್ಯೂರಿಟಿ ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.