ವಿದ್ಯಾರ್ಥಿ- ಯೋಧರ ತ್ಯಾಗದ ಬಗ್ಗೆ ತಿಳಿಸಬೇಕು

ಸಿರವಾರ.ಮಾ.೨೩-ದೇಶ ಸೇವೆಗಾಗಿ ತಮ್ಮ ಕುಟುಂಬ ವಯಕ್ತಿಕ ಜೀವನವನ್ನು ತೊರೆದು ದೇಶ, ದೇಶ ರಕ್ಷಣೆಯಲ್ಲಿ ತೊಡಗಿಕೊಂಡು ಪ್ರಾಣ ತ್ಯಾಗವನ್ನು ಸಹ ಮಾಡಿದ್ದಾರೆ, ಇಂತಹ ಯೋಧರಿಗೆ ಗೌರವ ಸಲ್ಲಿಸುವ ಜೊತೆಗೆ, ಅವರ ಪ್ರೇರಣೆಯಾಗಿಸುವುದಕ್ಕಾಗಿ ಶಾಲೆಯ ಆವರಣದಲ್ಲಿ ಯೋಧರ ಪುತ್ತಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿ.ಪಂ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದಲ್ಲಿ ದಿ.ವೀರಯೋಧ ಮಲ್ಲಿಕಾರ್ಜುನ ಎಸ್.ಛಲವಾದಿ ಅವರ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿ.ಐ.ಎಸ್.ಎಫ್ ಕಾನ್ಸ್‌ಟೇಬಲ್ ಎಫ್.ಎಸ್. ನಾಯಕ, ಕಾಂಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ್, ಬಸವರಾಜ ಸಾಹುಕಾರ್, ಪೆದ್ದಯ್ಯ ನಾಯಕ, ಬಸವರಾಜ ಮರಕಂದಿನ್ನಿ, ಅಮರೇಶ ಗುಡಿಸಲಿ, ಮಹಾಲಿಂಗಪ್ಪ, ಚಾಂದ್ ಪಾಷ, ಚನ್ನಯ್ಯ ಸ್ವಾಮಿ, ಎಮ್.ಡಿ.ಗೌಸ್, ನಾಗರಾಜ, ಅಶೋಕ, ಮಲ್ಲಿಕಾರ್ಜುನ, ಭೀಮೇಶ್, ರಿಯಾಜ್ ಪಾಷ, ಜಮಶೀರ್ ಅಲಿ, ವೆಂಕೋಬ, ಶಿಕ್ಷಕರಾದ ಪಾರ್ವತಿ, ಶಕುಂತಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.