ವಿದ್ಯಾರ್ಥಿ, ಯುವ ಕಾಂಗ್ರೆಸ್ ನಿಂದ ಇಂದಿರಾ ಸ್ಮರಣೆ

ಬಳ್ಳಾರಿ ನ 20 : ಭಾರತದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, ಭಾರತ ರತ್ನ ಇಂದಿರಾ ಗಾಂಧಿ ಅವರ 103 ನೇ ಜನ್ಮದಿನದ ಅಂಗವಾಗಿ ನಿನ್ನೆ ಸಂಜೆ ನಗರದ ರಾಘವ ಕಲಾ ಮಂದಿರದ ಬಳಿ‌ಇರುವ ಇಂದಿರಾಗಾಂದಿ ವೃತ್ತದಲ್ಲಿ ಇಂದಿರಾ ಅವರ ಭಾವಚಿತ್ರಕ್ಕೆ ಗೌರವ ನಮ್ಮ ಸಲ್ಲಿಸುವ ಮೂಲಕ ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸ್ಮರಿಸಿದರು.
ಯುವ ಕಾಂಗ್ರೆಸ್ ಮುಖಂಡ ಜೆ.ವಿ.ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿ ವಿದ್ಯಾನಗರದ ವಾಸು, ವಿದ್ಯಾರ್ಥಿ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ಸಿದ್ದು ಹಳ್ಳೇಗೌಡ, ನೇತೃತ್ವದಲ್ಲಿ ಕೇಕ್ ಕತ್ತಿರಿಸಿ, ಮೇಣದ ಬತ್ತಿ ಹಚ್ಚಿ ಸಿಹಿ ಹಂಚಲಾಯಿತು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಅಸುಂಡಿ ನಾಗರಾಜ್ ಗೌಡ, ಜೈಕುಮಾರ್ ನಾಯ್ಡು, ತಾಯಪ್ಪ, ಲಕ್ಷ್ಮಣ, ಶಮೀಮ್ ಜಕ್ಲಿ, ಶೇಖಮ್ಮ, ಅಂಜಿನಪ್ಪ, ಬಿ.ಎಂ.ಪಾಟೀಲ್,ಈರನಗೌಡ, ಗೌಳಿ ಅನಿಲ್ ಕುಮಾರ್, ನೂರ್, ಶಾಂತಮ್ಮ, ಲಕ್ಷ್ಮಿ, ಪ್ರೀತಿ, ರತ್ನಮ್ಮ, ವಿಜಯ್ ಕುಮಾರ್, ಗೋವರ್ಧನ್, ವಿಕ್ಕಿ, ಮತ್ತಿತರರು ಭಾಗವಹಿಸಿದ್ದರು.