ವಿದ್ಯಾರ್ಥಿ ಮಿತ್ರ ಯೋಜನೆಯಡಿ ಶಾಲೆಗೆ ಸಾಮಗ್ರಿಗಳ ವಿತರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.. ಮಾ.21 ವಿದ್ಯಾರ್ಥಿ ಮಿತ್ರ ಯೋಜನೆಯಡಿ  ಶಾಲೆಗೆ  ಕಂಪ್ಯೂಟರ್ , ಆಟದ ಸಾಮಾನುಗಳು ಹಾಗೂ ವೈಜ್ಞಾನಿಕ ಸಾಮಾಗ್ರಿಗಳನ್ನು  ಎಸ್ ಎಲ್ ಆರ್ ಮೆಟಾಲಿಕ್ಸ್  ಮತ್ತು ಮೈರಾಡ ಸಂಸ್ಥೆ ವಿತರಿಸಿದರು
 ತಾಲೂಕಿನ ಮರಬ್ಬಿ ಹಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಮಕ್ಕಳಿಗೆ ಅನುಕೂಲವಾಗಲು ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಶಾಲೆಯ ಮುಖ್ಯ ಗುರುಗಳಾದ ನಾರಾಯಣ ನಾಯಕ್ ಮಾತನಾಡಿ ಎಸ್ ಎಲ್ ಆರ್ ಮೆಟಾಲಿಕ್ಸ್ ನವರು ಶಾಲೆಗಳಿಗೆ ನೀಡುವ ನೆರವು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿರುವುದು ಉತ್ತಮ ಕೆಲಸ ಎಂದರು .ಅವರು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .
ಮೈರಾಡಾ ಸಂಸ್ಥೆ ಯ ಫೀಲ್ಡ್ ಮ್ಯಾನೇಜರ್ ಶ್ಯಾಮ್ ಕುಮಾರ್ ಮಾತನಾಡಿ, ಎಸ್ ಎಲ್ ಆರ್ ಮೆಟಾಲಿಕ್ಸ್ ಹಾಗೂ ಮೈರಾಡ ಸಂಸ್ಥೆಯಿಂದ, ಸುಮಾರು 75 ಸಾವಿರ ಮೊತ್ತದಲ್ಲಿ
ವಿದ್ಯಾರ್ಥಿಗಳಿಗೆ ಆಟದ ಸಾಮಾಗ್ರಿ , ಕಂಪ್ಯೂಟರ್, ವಾಲಿಬಾಲ್, ಕ್ರಿಕೆಟ್ ಬ್ಯಾಟ್, ಬಾಲ್, ವೈಜ್ಞಾನಿಕ ಸಾಮಾಗ್ರಿಗಳನ್ನು  ಕೊಡಮಾಡಲಾಗಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಬೆಳೆಯುವಲ್ಲಿ ಈ ಭಾಗದ ಅನೇಕ ಶಾಲೆಗಳಿಗೆ ಸಹಾಯ ಹಸ್ತ ನೀಡುತ್ತಿದ್ದೇವೆ.ಕೆಲವು ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿ,ಅವರ ವೆಚ್ಚ ಭರಿಸಲಾಗುತ್ತಿದೆ ಎಂದು  ಹೇಳಿದರು.
ವಿಶೇಷ ಅತಿಥಿಯಾಗಿ ಜಿ ಕೆ ನ್ಯೂಸ್ ನ  ಅಬ್ದುಲ್ ಗಫರ್ ಖಾನ್ ಮಾತನಾಡಿ, ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಎಸ್ ಎಲ್ ಆರ್ ಮೆಟಾಲಿಕ್ಸ್ ನೀಡುವ ನೆರವು  ಶ್ಲಾಘನೀಯ ಎಂದರು.
ಶಿಕ್ಷಕಿ ವಾಣಿ ರವರು ಮಾತನಾಡಿ,ಎಸ್ ಎಲ್ ಆರ್ ಮೆಟಾಲಿಕ್ಸ್ ಹಾಗೂ ಮೈರಾಡ ಸಂಸ್ಥೆ ಯ ವಿದ್ಯಾರ್ಥಿ ಮಿತ್ರ ಯೋಜನೆ  ಮಾದರಿಯಾಗಿದೆ ಎಂದರು. ವಿದ್ಯಾರ್ಥಿನಿ ಮೇಘನಾ, ಅನಿತಾ , ವಿದ್ಯಾರ್ಥಿಗಳಾದ ಮುರಡಿ ಯಮನೂರು, ದೀಕ್ಷಿತ್ ಮಾತನಾಡಿದರು. ಪ್ರಾರ್ಥನೆಯನ್ನು  ನಿಜ್ ಬಾ ಮತ್ತು ಸ್ನೇಹಾ ಮಾಡಿದರು. ಜಗದೀಶ್ ಸ್ವಾಗತಿಸಿದರು. ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.