ವಿದ್ಯಾರ್ಥಿ ಬೆಳವಣೆಗೆಗೆ ಪಾಲಕ,ಶಿಕ್ಷಕ,ಬಾಲಕ ಪಾತ್ರ ಮಹತ್ವದ್ದು

ಇಂಡಿ:ಸೆ.23:ಪ್ರತಿ ವಿದ್ಯಾರ್ಥಿಯ ಬೆಳವಣೆಗೆಗೆ ಪಾಲಕ,ಶಿಕ್ಷಕ, ಬಾಲಕ ಮೂವರ ಪಾತ್ರವೂ ಮಹತ್ವದ್ದು ಎಂದು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಬಗಲಿ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡುತ್ತಿದ್ದರು.
ಗೌರವ ಸಹಕಾರ್ಯದರ್ಶಿ ಸಿದ್ದಣ್ಣ ತಾಂಬೆ ಮಾತನಾಡಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿದ್ದು ಪಾಲಕರೂ ವಿದ್ಯಾರ್ಥಿಯ ಬೆಳವಣೆಗೆಯಲ್ಲಿ ಸಹಕರಿಸಬೇಕೆಂದರು.
ಉಪ ಪ್ರಾಚಾರ್ಯ ಎ.ಪಿ.ಬಿರಡ, ಎ.ಬಿ.ಕಲ್ಯಾಣಿ,ಶ್ರೀಮತಿ ವಿ.ಜಿ.ವಾಲಕಾರ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಪಾಲಕರ ಪ್ರತಿನಿಧಿಗಳಾದಲ್ಲಾಭಕ್ಷ ಲಂಗೋಟಿ,ಮಹಾನಂದಾ ಬಿರಾದಾರ ವೇದಿಕೆಯ ಮೇಲಿದ್ದರು.