ವಿದ್ಯಾರ್ಥಿ ಪ್ರಣವ್‌ಗೆ ನಿರ್ಮಲಾನಂದ ಶ್ರೀಗಳ ಅಭಿನಂದನೆ

ಮಾಲೂರು, ನ.೩-ಗಣಿತದಲ್ಲಿ ಅತಿ ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಉತ್ತರ ನೀಡಿ ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಪ್ರಣವ್ ಸಿ.ಗೌಡ ವಿದ್ಯಾರ್ಥಿಯನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಅಭಿನಂದಿಸಿದರು.
ಪಟ್ಟಣದ ಬಿಜಿಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿ ಪ್ರಣವ್ ಸಿ.ಗೌಡ ನನ್ನು ಅಭಿನಂದಿಸಿದ ಶ್ರೀ ನಿರ್ಮಲಾನಂದ ಸ್ವಾಮಿಗಳು ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಮಲ್ಲಿಯಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಹಾಗೂ ಸುಕನ್ಯಾ ದಂಪತಿಗಳ ೬ ವರ್ಷದ ಮಗನಾದ ಪ್ರಣವ್ ಸಿ.ಗೌಡ ಪ್ರಸ್ತುತ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಪಂಚದ ಹಾಗು ಹೋಗುಗಳ ಪರಿಚಯ, ರಾಷ್ಟ್ರೀಯ ಸುದ್ದಿಗಳು, ಪ್ರಪಂಚದ ಜ್ಞಾನ, ಜನರಲ್ ನಾಲೆಜ್ಡ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕ್ಷಣಮಾತ್ರದಲ್ಲಿ ಉತ್ತರಿಸುತ್ತಾನೆ. ಬಾಲಕನ ಪ್ರತಿಭೆಗೆ ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶ್ರೀ ನಿರ್ಮಲಾನಂದ ಸ್ವಾಮಿಗಳು ದಾಖಲೆ ಮಾಡಿರುವ ವಿದ್ಯಾರ್ಥಿಯ ಮಾಹಿತಿ ಪಡೆದು ಬಾಲಕನನ್ನು ಕರೆಯಿಸಿ ಆತನ ಪ್ರತಿಭೆಯ ಬಗ್ಗೆ ಮಾಹಿತಿ ಪಡೆದರು. ಗಣಿತದಲ್ಲಿ ಅತ್ಯಂತ ಕ್ಲಿಷ್ಟಕರವಾದ ಒಂದರಿಂದ ನೂರು ಅಂಕೆಗಳಿಗೆ ಸ್ಕೈರ್ ರೂಪದಲ್ಲಿ ಉತ್ತರಿಸುವ ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ, ವಲ್ಡ್ ಬುಕ್ ಆಫ್ ರೆಕಾರ್ಡ್ ಯು.ಕೆ, ಏಷಿಯಾ ರೆಕಾರ್ಡ್ಸ್ ಬುಕ್ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ೩ವಿಶ್ವದಾಖಲೆಗಳನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ನಮೂದಾಗಿರುವ ೩ ಪ್ರಶಸ್ತಿಗಳನ್ನು ಪರಿಶೀಲಿಸಿದರು.
ಬಾಲಕನನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲೆಂದು ಆಶಿಸಿದರು.
ಕೇವಲ ೬ವರ್ಷದ ಪುಟಾಣಿಯೊಬ್ಬನ ಜ್ಞಾಪಕ ಶಕ್ತಿಗೆ ದೇಶವೇ ಗೌರವ ಸಮರ್ಪಿಸಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿತ್ತು. ಪಠ್ಯ ಹಾಗೂ ಸಾಮಾನ್ಯ ಜ್ಞಾನದ ವಿಷಯದಲ್ಲಿ ಅಗಾಧವಾದ ಜ್ಞಾಪಕ ಶಕ್ತಿಯನ್ನು ಹೊಂದಿರುವ ಪ್ರಣವ್.ಸಿ.ಗೌಡ ಪ್ರಚಲಿತ ವಿದ್ಯಮಾನಗಳ ಕುರಿತು ಯಾವುದೇ ಅಡೆಯಿಲ್ಲದೆ ಮಾತನಾಡುತ್ತಾನೆ. ದೇಶದ ರಾಜಧಾನಿಗಳು, ಬಾವುಟಗಳು, ಭಾಷೆ, ನದಿಗಳು, ಸರೋವರಗಳು, ಅತಿ ಹೆಚ್ಚು ಉದ್ದದ, ಎತ್ತರದ ಕಟ್ಟಡಗಳು, ವಿದ್ಯಮಾನಗಳು ಸೇರಿದಂತೆ ಪ್ರಥಮಗಳ ಪಟ್ಟಿಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಭಾಷೆಯ ಮೇಲೆ ಹಿಡಿತ ಸಾಸಿರುವ ಪ್ರಣವ್.ಸಿ.ಗೌಡ ಸಾಮಾನ್ಯ ಜ್ಞಾನದ ಕುರಿತು ಕೇಳುವ ಪ್ರಶ್ನೆಗಳಿಗೆ ಹರಳಿನಂತೆ ಉತ್ತರಿಸುತ್ತಾನೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದ ಮಹಾಸ್ವಾಮಿ, ಸಮುದಾಯದ ಮುಖಂಡರಾದ ಆರ್.ಪ್ರಭಾಕರ್, ಪುರಸಭಾ ಸದಸ್ಯರಾದ ಪರಮೇಶ್, ರಾಘವೇಂದ್ರ, ಬಿ.ಪಿ,ಬೈಯಣ್ಣ, ಎಂ.ಜಿ.ಚಂದ್ರಶೇಖರ್,ಕೆ.ವಿ.ಸುಕನ್ಯ, ಕಲ್ಲಂಡೂರು ಲೋಕೇಶ್,ಕಾಮದೇನು ಹರಿನಾಥಗುಪ್ತ, ಶಿಕ್ಷಕ ತಿಮ್ಮರಾಯಪ್ಪ, ಇತರರು ಹಾಜರಿದ್ದರು.
ಮಾಲೂರು ಪೋಟೋ ೩. ಮಾಲೂರು ಪಟ್ಟಣದ ಬಿಜಿಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿನ್ನಿಸ್ ಬುಕ್ ಆಫ್ ವರ್ಡ್ಲ್ ರೆಕಾರ್ಡ್, ವಲ್ಡ್ ಬುಕ್ ಆಫ್ ರೆಕಾರ್ಡ್ ಯು.ಕೆ, ಏಷಿಯಾ ರೆಕಾರ್ಡ್ಸ್ ಬುಕ್ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ೩ವಿಶ್ವದಾಖಲೆಗಳನ್ನು ೩ ಪ್ರಶಸ್ತಿಗೆ ಪಾತ್ರರಾಗಿರುವ ವಿದ್ಯಾರ್ಥಿ ಪ್ರಣವ್ ಸಿ.ಗೌಡ ನನ್ನು ಶ್ರೀ ನಿರ್ಮಲಾನಂದ ಸ್ವಾಮಿಗಳು ಅಭಿನಂದಿಸಿ ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.