ಮಾಲೂರು.ಜು೭:ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಪಟ್ಟಣದ ಪದ್ಮಾವತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಜ್ಞಾನ ನಿಧಿಶಿಷ್ಯ ವೇತನವನ್ನು ೨೦೨೩-೨೪ನೇ ಸಾಲಿನಲ್ಲಿ ವೃತ್ತಿಪರ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಮುಗಿಯುವವರೆಗೂ ಪ್ರತಿ ತಿಂಗಳು ೭೫೦ ರಿಂದ ೧೦೦೦ ರೂಗಳನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡುವ ಯೋಜನೆ ಮತ್ತು ಆರೋಗ್ಯ ರಕ್ಷಾ ಯೋಜನೆಗೆ ಚಾಲನೆ ನೀಡಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾಲೂರು ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ೯ ವರ್ಷಗಳಿಂದ ಸುಮಾರು ೧೫೩೮ ಸ್ವಸಹಾಯ ಸಂಘಗಳು ಹಾಗೂ ೧೩೩೩ ಪ್ರಗತಿ ಬಂಧು ಕೃಷಿಕರ ಸಂಘ ಪ್ರಾರಂಭ ಮಾಡಿ ೨೪೦೬೩ ಸದಸ್ಯರಿಗೆ ಅವರ ಅಗತ್ಯ ಪೂರಕವಾಗಿ ಪ್ರಗತಿನಿಧಿ ನೀಡಿ ಸ್ವ-ಉದ್ಯೋಗ ಮತ್ತು ಕೃಷಿ ಮಾಡಲು ಪ್ರಗತಿನಿಧಿ ನೀಡಿ ಅವರಿಗೆ ಕೃಷಿ ತರಬೇತಿ, ಕೃಷಿ ಅಧ್ಯಯನ ಪ್ರವಾಸ, ಮಹಿಳೆಯರಿಗೆ ತಿಂಗಳಿಗೊಂದು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವ-ಉದ್ಯೋಗ ಮಾಡಲು ತರಬೇತಿ ಆಯೋಜನೆ ಮಾಡಲಾಗುತ್ತಿದೆ. ಹಾಲಿನ ಡೈರಿ, ದೇವಸ್ಥಾನ ಜಿರ್ಣೋದ್ಧಾರ, ನಮ್ಮ ಊರು ನಮ್ಮ ಕೆರೆ ಅಭಿವೃದ್ಧಿ, ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರು, ವಿಕಲಚೇತನರಿಗೆ ಕಾರ್ಯಕ್ರಮದಡಿಯಲ್ಲಿ ಸಲಕರಣಿಗಳ ವಿತರಣೆ, ಪರಿಸರ ಕಾರ್ಯಕ್ರಮ, ವಾತ್ಸಲ್ಯ ಮನೆ, ವಾತ್ಸಲ್ಯ ಕಿಟ್ ವಿತರಣೆ, ದುಡಿಯಲು ಶಕ್ತಿ ಇಲ್ಲದವರಿಗೆ ತಿಂಗಳಿಗೊಮ್ಮೆ ಮಾಶಾಸನ ವಿತರಣೆ ಈ ಎಲ್ಲಾ ಅನುದಾನಗಳನ್ನು ತಾಲೂಕಿನ ಎಲ್ಲಾ ಸದಸ್ಯರು ಸದುಪಯೋಗ ಪಡಿಸಿಕೊಂಡು ಪೂಜ್ಯರ ಆಶಯದಂತೆ ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು.
ಪಿಠೋಪಕರಣಗಳು ಹಾಗೂ ಜನಮಂಗಲ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಕೋಲಾರ ಜಿಲ್ಲಾ ನಿರ್ದೇಶಕರಾದ ಪದ್ಮಯ್ಯ ಹಾಗೂ ತಾಲೂಕು ಯೋಜನಾಧಿಕಾರಿ ಸತೀಶ್ ಎಚ್, ಕೃಷಿ ಅಧಿಕಾರಿ ಮಧುರಾಜ್, ವಿಚಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಜ್ಞಾನವಿಕಾಸ ಸಮನ್ವಯಾಧಿಕಾರ ಉಷಾರಾಣಿ ಸಿ, ಪ್ರಬಂಧಕರಾದ ಪುಷವತಿ, ನೋಡಲ್ ಅಧಿಕಾರಿ ಲಕ್ಷ್ಮೀನರಸಿಂಹಯ್ಯ, ಮೇಲ್ವಿಚಾರಕರಾದ ರಮೇಶ್, ದರ್ಶನ್, ರಂಜಿತ್ ಉದಯ ಶಂಕರ್, ಕವಿತ, ಮಂಜುನಾಥ, ಆದಿನಾರಾಯಣಸ್ವಾಮಿ, ಪುರುಷೋತ್ತಮ್ ಮತ್ತು ಸೇವಾಪ್ರತಿನಿಧಿಗಳು ಹಾಗೂ ಭಾಗವಹಿಸಿದ್ದರು.