ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ      

                  
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.19: ನಗರದ ಮಯೂರ ಹೋಟೆಲ್ ಬಳಿ ಇರುವ ಮೆಟ್ರಿಕ್ ಪೂರ್ವ.ಬಾಲಕರ.ವಿದ್ಯಾರ್ಥಿ.ನಿಲಯದ.ಹಾಸ್ಟೆಲ್.ಕಾವಲುಗರಾನಿಂದ  ದಲಿತ ವಿಧ್ಯಾರ್ಥಿ.ಮೇಲೆಮಾರಣಾಂತಿಕ ಹಲ್ಲೆಯನ್ನು ಖಂಡಿಸಿರುವ ಡಿವೈಎಫ್ ಐ ಜಿಲ್ಲಾ ಘಟಕವು ಈ ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ಬಳ್ಳಾರಿ ನಗರದ ಮಯೂರ ಹೋಟೆಲ್ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೊನ್ನೆ ಬೆಳಗಿನ ಜಾವ ಹಾಸ್ಟೆಲ್ ಕಾವಲುಗಾರನಿಂದಾಗಿ ದಲಿತ ವಿದ್ಯಾರ್ಥಿ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ವಸತಿ ನಿಲಯಗಳಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಮಕ್ಕಳಿಗೆ ವ್ಯಾಯಾಮ ಕಲಿಸಿಕೊಡುವುದು ವಾಡಿಕೆ. ಮೊನ್ನೆ ಬೆಳಗಿನ ಜಾವ 6:30 ರ ವೇಳೆ ಶಿಸ್ತು ಕಲಿಸಲು ಹಾಸ್ಟೆಲ್ ನ ವಾರ್ಡನ್ ಎಂ.ಜಿ.ರುದ್ರಾಚಾರ್ ಅವರು ಎಂದಿನಂತೆ ಮಕ್ಕಳಿಗೆ ವ್ಯಾಯಾಮಕ್ಕೆ ಅಣಿಗೊಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿನ ಮಕ್ಕಳು ಮೊದಲೇ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಇಂತಹ ವೇಳೆ ಅವರ ದೈಹಿಕ ಕ್ಷಮತೆ ಆಧರಿಸಿ ವ್ಯಾಯಾಮ ಹೇಳಿಕೊಟ್ಟರೆ ಚಿಂತೆ ಇಲ್ಲ. ಅದಕ್ಕೆ ತಕ್ಕಂತೆ ಊಟೋಪಚಾರದ ವ್ಯವಸ್ಥೆಯೂ ಇರಬೇಕು. ಆದರೆ, ಇಲ್ಲೇನಾಗಿದೆ? ಈ ವಸತಿ ನಿಲಯದಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವ್ಯಾಯಾಮ ತರಬೇತಿ ನೀಡುವಾಗ 9ನೇ ತರಗತಿಯ ದಲಿತ ವಿದ್ಯಾರ್ಥಿ ವೈ.ಎಸ್.ದಿವಾಕರ್ ತಪ್ಪು ಮಾಡಿದನೆಂಬ ಕಾರಣಕ್ಕೆ.ಹಾಸ್ಟೆಲ್‌ನಲ್ಲಿದ್ದ ಕಾವಲುಗಾರ ಮನೋಹರ್ ಪಾಟೀಲ್ ಎನ್ನುವಾತ ಆ ವಿದ್ಯಾರ್ಥಿಗೆ ಬರೋಬ್ಬರಿ 700 ಬಸ್ಕಿ ಹೊಡೆಯುವಂತೆ ಆದೇಶಿಸಿದ್ದಾನೆ.ಇಷ್ಟಕ್ಕೂ ಮನೋಹರ್ ಪಾಟೀಲ್ ಕಾವಲುಗಾರನಾಗಿದ್ದು ಸದರಿ ವಿದ್ಯಾರ್ಥಿಗೆ ಬಸ್ಕಿ ಹೊಡೆಯುವಂತೆ ಸೂಚಿಸಲು ಆತ ಯಾರು? ಎಂದು ಪ್ರಶ್ನಿಸಿದ್ದಾರೆ.
ಅವನ ಆದೇಶಕ್ಕೆ ಭಯಭೀತನಾದ ವಿದ್ಯಾರ್ಥಿ 700 ಬಸ್ಕಿ ಹೊಡೆಯಲು ಸಾಧ್ಯವಾಗದೇ ಕುಸಿದು ಬಿದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಿರದ ಕಾವಲುಗಾರ ಮನೋಹರ್ ಪಾಟೀಲ್ ಕಟ್ಟಿಗೆ ತೆಗೆದುಕೊಂಡು ದನಕ್ಕೆ ಹೊಡೆದಂತೆ ಹೊಡೆದು ವೈ.ಎಸ್.ದಿವಾಕರ್‌ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದನ್ನು ಗಮನಿಸಿದ್ದ ಅಲ್ಲಿನ ಎಲ್ಲ ವಿದ್ಯಾರ್ಥಿಗಳು ಅಕ್ಷರಶಃ ಭಯ ಭೀತರಾಗಿ. ತಮ್ಮ ತಮ್ಮ ತಂದೆ ತಾಯಿಗಳಿಗೆ ಈ ಕ್ರೂರಿ ಘಟನೆಯ ವಿಷಯ ತಿಳಿಸಿ ನಮ್ಮನ್ನು ಈ ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿ ಈ ಹಾಸ್ಟೆಲ್ ನಲ್ಲಿ ಇದ್ರೇ ನಮ್ನನ್ನು ಸಾಯಿಸಿ ಬಿಡುತ್ತಾರೆ ಎಂದು ತಮ್ಮ ಅಳಲು ತೊದುಕೊಂಡಿದ್ದಾರೆ ಇದರಿಂದ ಭಯಬಿತರದ ವಿದ್ಯಾರ್ಥಿಗಳ ತಾಯಿ ತಂದೆಯರು ತಮ್ಮ ಮಕ್ಕಳನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಲು ಯೋಚಿಸಿ ತಮ್ಮ ಅಳಲನ್ನು ತೋಡಿಕೊಂಡು ಭಯಬಿರಾಗಿ ಸಂಬಂದಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಫ್ಐಆರ್ ಆಗಿ 3 ದಿನ ಕಳೆದರೂ ಇನ್ನು ಬಂಧಿಸಿಲ್ಲ ಇಷ್ಟಕ್ಕೂ ಮನೋಹರ್ ಪಾಟೀಲ್ ಯಾರು?:ಸರ್ಕಾರ ನೇಮಿಸಿದೆಯೇ? ಗುತ್ತಿಗೆ ಆಧಾರದ ಅಡಿ ಆತ ನೇಮಕ ಆಗಿದ್ದಾನೆಯೇ? ಅಥವಾ ದಿನಗೂಲಿಯಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾನೆಯೇ? ಕಾವಲುಗಾರನಾಗಿದ್ದುಕೊಂಡು ವಿದ್ಯಾರ್ಥಿಗಳ ರಕ್ಷಣೆಗೆ ನಿಲ್ಲಬೇಕಾದದ್ದು ಆತನ ಕರ್ತವ್ಯ. ಒಂದು ಹೆಜ್ಜೆ ಮುಂದೆ ಹೋಗಿ ದಲಿತ ವಿದ್ಯಾರ್ಥಿಯನ್ನು ಮನಬಂದಂತೆ ಬಡಿಯಲು ಇವನಿಗೆ ಅಧಿಕಾರ ನೀಡಿದವರು ಯಾರು?
ಮೂಲತಃ ಸಂಡೂರು ತಾಲೂಕಿನ ತುಮಟಿ ಗ್ರಾಮದ ವಿದ್ಯಾರ್ಥಿ ವೈ.ಎಸ್.ದಿವಾಕರ್.ಈತನಿಗೆ ಆದ ದೌರ್ಜನ್ಯ ತಿಳಿದು, ದೌಡಾಯಿಸಿ ಬಂದ ಆತನ ಪೋಷಕರು ಮಗನನ್ನು ನೋಡಿ ಕಣ್ಣೀರು ಹಾಕಿದ್ದಾರೆ. ತಮ್ಮ ಪುತ್ರನಿಗಾದ ಅನ್ಯಾಯವನ್ನು ಸರಿಪಡಿಸಲು ಕೂಡಲೇ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆಯ ವಿವರಗಳನ್ನು ಪಡೆದ ಪೊಲೀಸರು ಪ್ರಕರಣ ದಾಖಲಿಸಲು ಏಕೆ? ವಸತಿ ನಿಲಯಗಳಲ್ಲಿ ಮಕ್ಕಳ ಮೇಲೆ ಈ ರೀತಿ ಅನ್ಯಾಯ, ದೌರ್ಜನ್ಯ ನಡೆದರೆ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತಾಳುವುದು ಎಷ್ಟರ ಮಟ್ಟಿಗೆ ಸರಿ?ಬಳ್ಳಾರಿ ಇತಿಹಾಸದಿಂದಲೂ ತನ್ನದೇ ಆದ ಒಂದು ಸೈದ್ಧಾಂತಿಕ ನೆಲೆಗಟ್ಟು ಇದೆ. ಇಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ಇಲ್ಲ. ಶಾಂತಿಯ ನೆಲೆವೀಡಾದ ಬಳ್ಳಾರಿಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ಮನೋಹರ್ ಪಾಟೀಲ್ ನಂತಹ ವಿಕೃತನ ಬಗ್ಗೆ ಪೊಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ವಸತಿ ನಿಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮತ್ತು ಕಾವಲುಗಾರ ಮನೋಹರ್ ಪಾಟೀಲ್ ಅವರನ್ನು ಕೂಡಲೇ ಅಮಾನತ್ತು ಗೊಳಿಸಬೇಕು. ಮನೋಹರ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರಗಿಸಿರುವ ಗಾಂಧಿನಗರ ಠಾಣೆಯ ಪೊಲೀಸ್ ರು ಕೊನೆಗು ಮನೋಹರ್ ಪಾಟೀಲ್ ವಿರುದ್ಧ ದೌರ್ಜನ್ಯ, ಮಾರಣಾಂತಿಕ ಹಲ್ಲೆ ಸೇರಿ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕೇವಲ ಪ್ರಕರಣ ದಾಖಲಿಸಿ ಸುಮ್ಮನಿದ್ದರೆ ಸಾಲದು. ಮನೋಹರ್ ಪಾಟೀಲ್‌ನನ್ನು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಪೊಲೀಸ್  ಮನಃಸ್ಥಿತಿಯ ವ್ಯವಸ್ಥೆಯ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಯು.ಎರ್ರಿಸ್ವಾಮಿ, ಜಿಲ್ಲಾ. ಉಪಾಧ್ಯಕ್ಷರಾದ ಬೈಲ.ಹನುಮಪ್ಪ, ಸಿ.ವೆಂಕಟೇಶ್, ಹೊನ್ನೂರ್ ಸಾಬ್, ಖಜಾಂಚಿ ನವೀನ್, ಜಿಲ್ಲಾ ಸಮಿತಿ ಸದಸ್ಯ ಜಿ.ಎನ್.ಎಱ್ರಿಸ್ವಾಮಿ, ಪಿ.ಲೋಕೇಶ್, ತಾಲ್ಲೂಕು ಅಧ್ಯಕ್ಷ ತಿಪ್ಪೇರುದ್ರ, ಕಾರ್ಯದರ್ಶಿ ಎಱ್ರಿಸ್ವಾಮಿ, ಗ್ರಾಮಾಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.