ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ನ.25:- ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಮಾಡುವವರಿಗೆ ಉತ್ತಮ ರೀತಿಯಲ್ಲಿ ಆಹಾರ ತಯಾರಿಸುವ ತರಬೇತಿಯನ್ನು ನೀಡಿರಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು. ಮತ್ತು ಏಪೆÇ್ರೀನ್‍ಗಳನ್ನು ಧರಿಸಿ ಅಡುಗೆಯನ್ನು ತಯಾರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.
ಕರ್ನಾಟಕ ಮುಕ್ತ ಗಂಗೋತ್ರಿಯಲ್ಲಿನ ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ನಿಗಮ/ಮಂಡಳಿ ಹಾಗೂ ಆಯೋಗಗಳಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಕುರಿತು ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಎಂದರೆ ಬರಿ ಸ್ಕಾಲರ್‍ಶಿಪ್, ಉಚಿತ ಊಟ, ಬಟ್ಟೆ ನೀಡುತ್ತಾರೆ ಅನ್ನುವುದಕ್ಕಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದೆ ಅವರ ಭವಿಷ್ಯದಲ್ಲಿ ಏನು ಮಾಡಬೇಕು ಹಾಗೂ ಅವರು ಎಲ್ಲ ಸಮಾನತೆ ಮತ್ತು ಗೌರವ ದೊಂದಿಗೆ ಜೀವನ ನಡೆಸುವ ಉದ್ದೇಶಕ್ಕಾಗಿ ನಮ್ಮ ಇಲಾಖೆ ಇರುವುದು. ಅದೇ ರೀತಿ ಅವರಲ್ಲಿ ಯಾವ ರೀತಿಯ ಬದಲಾವಣೆ ಉಂಟಾಗಿದೆ ಎಂಬ ಮಾಹಿತಿಯನ್ನು ಫಾಲೋಅಪ್ ಮಾಡಿ ತಿಳಿದುಕೊಂಡಿರಬೇಕು ಎಂಬುದು ಈ ಯೋಜನೆಗಳ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಹಾಸ್ಟೆಲ್‍ನಲ್ಲಿ ಅಡುಗೆಯನ್ನು ಕೊಟ್ಟಿರುವ ಫುಡ್ ಮೆನು ಚಾರ್ಟ್ ನಲ್ಲಿರುವಂತೆಯೇ ಪ್ರತಿಯೊಂದು ಆಹಾರವನ್ನು ವಾರ್ಡನ್‍ಗಳು ಅಡುಗೆ ತಯಾರಿಸುವವರಿಗೆ ಮಾರ್ಗದರ್ಶನ ನೀಡಿ ಅದೇ ರೀತಿ ಸರಬರಾಜಗುವಂತೆ ನೋಡಿಕೊಳ್ಳಬೇಕು ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ತದನಂತರ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೌರ್ಜನ್ಯ ತಡೆ ಅಭಿಯಾನಕ್ಕೆ ಸಂಬ0ಧಿಸಿದ0ತೆ ವಿಡಿಯೋ ಕಾನ್ಫರೆನ್ಸ್ನ ಮೂಲಕ ಸಂವಾದ ನಡೆಸಿ ದೌರ್ಜನ್ಯ ಪ್ರಕರಣಗಳಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಮತ್ತು ಎಷ್ಟು ಪ್ರಕರಣಗಳಿಗೆ ಪರಿಹಾರ ದೊರೆತಿದೆ ಎಂದು ಜಿಲ್ಲಾವಾರು ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡು ಪರಿಹಾರ ಸಿಗದ ಪ್ರಕರಣಗಳಿಗೆ ಶೀಘ್ರವೇ ಪರಿಹಾರ ದೊರಕಿಸಿ ಕೊಡುವಂತೆ ಸೂಚನೆ ನೀಡಿದರು.
ನಕಲಿ ಜಾತಿ ಪ್ರಮಾಣ ಪತ್ರದ ವಿಷಯದಲ್ಲಿ ಎಲ್ಲಾ ಅಧಿಕಾರಿಗಳು ಮೊದಲು ಜಾತಿ ಉಪಜಾತಿಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು ಈ ಕುರಿತಂತೆ ಕಾರ್ಯಗಾರಗಳನ್ನು ಅಧಿಕಾರಿಗಳಿಗಾಗಿಯೇ ನಡೆಸಬೇಕು. ಅಂತರ್ಜಾತಿ ವಿವಾಹದ ಬಗ್ಗೆ ಮಾತನಾಡಿ ಅಂತರ್‍ರ್ಜಾತಿ ವಿವಾಹಗಳನ್ನು ಪೆÇ್ರೀತ್ಸಾಹಿಸಬೇಕು.
ಅಂತರ್ಜಾತಿ ವಿವಾಹಿತರಿಗೆ ರಕ್ಷಣೆಯನ್ನು ನೀಡಬೇಕು. ಅವರನ್ನು ಸಮಾಜದಿಂದ ಬಹಿಷ್ಕಾರ ಹಾಕುವಂತಹ ಅಥವಾ ಅವರ ಮೇಲೆ ದೌರ್ಜನ್ಯ ನಡೆಯುವಂತಹ ಘಟನೆಗಳು ಗಮನಕ್ಕೆ ಬಂದರೆ ಅದನ್ನು ತಡೆಗಟ್ಟಬೇಕು ಎಂದು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಹಾಗೂ ಇಲಾಖೆಯ ವ್ಯಾಪ್ತಿಗೆ ಬರುವ ನಿಗಮ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.