ವಿದ್ಯಾರ್ಥಿ ನಿಲಯಕ್ಕೆ ಭೂಮಿಪೂಜೆ

ಸಂಜೆವಾಣಿ ವಾರ್ತೆಮೊಳಕಾಲ್ಮೂರು, ಆ. 14: ಇಂದು ಶಾಸಕ ಎನ್. ವೈ ಗೋಪಾಲಕೃಷ್ಣ ಆರುವರೆ ಕೋಟಿ ವೆಚ್ಚದ ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.ತಾಲೂಕಿನ  ಕೋನಸಾಗರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ನೂರು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೂಮಿ ಪೂಜೆ ನಡೆದಿದ್ದು, ಸುಮಾರು ಆರುವರೆ ಕೋಟಿ ವೆಚ್ಚದಲ್ಲಿ ಈ ನಿಲಯ ನಿರ್ಮಾಣವಾಗಲಿದ್ದು, ಈ ಬಾಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗದೆ.ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ವಿ. ರೂಪ, ಸಮಾಜ ಕಲ್ಯಾಣ ಇಲಾಖೆ ಶ್ರೀಮತಿ ಮಾಲತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ರಾಮಮೂರ್ತಿ, ವೀರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಂವುಲ್ಲಾ, ಎಸ್. ಖಾದರ್, ಬಿ. ಕೆ. ಇಸ್ಮಾಯಿಲ್, ಮಣಿಕಂಠ ನಾಗೇಂದ್ರ ಇನ್ನು ಮುಂತಾವರಿದ್ದರು.