ವಿದ್ಯಾರ್ಥಿ ಧ್ವನಿಯಾಗಿರುವ ಎಬಿವಿಪಿ ಕಾರ್ಯ ಶ್ಲಾಘನೀಯ : ಆರ್.ಪಿ ಮಠ

ಔರಾದ್ : ಮಾ.16:ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಪ್ರೇಮ, ಮತ್ತು ಸಮಾಜಸೇವಾ ಮನೋಭಾವ ಬೆಳೆಸುವ ಸ್ವಯಂ ಸೇವಕರ ದಿಟ್ಟ ನಿಲುವು ನೋಡಿ ಸಂತಸವಾಗುತ್ತದೆ, ಎಬಿವಿಪಿಯಂತ ಸ್ವಯಂ ಸೇವಕರ ಕೆಲಸ ದೊಡ್ಡದು, ರೈತ ಸೈನಿಕ ಮತ್ತು ವಿದ್ಯಾರ್ಥಿಗಳು ದೇಶದ ಶಕ್ತಿ ನಮ್ಮ ದೇಶಕ್ಕೆ ಇಂದು ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ಅಮರೇಶ್ವರ ಪದವಿಪೂರ್ವ ಕಲೇಜಿನ ಪ್ರಾಂಶುಪಾಲ ಆರ್.ಪಿ ಮಠ ಹೇಳಿದರು.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಶಿಬಿರದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಬಿವಿಪಿ ವಿದ್ಯಾರ್ಥಿಗಳ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದೆ. ಎಬಿವಿಪಿ ಕಾರ್ಯ ಮೆಚ್ಚುವಂತದಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಡಾ. ಶಾಲಿವಾನ ಉದಗೀರೆ ಭಿತ್ತಿಪತ್ರ ಬಿಡುಗಡೆ ಮಾಡುವ ಮೂಲಕ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೀದರ ಜಿಲ್ಲಾ ಘಟಕದ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತಿದೆ. ಮಾರ್ಚ್ 6 ರಿಂದ ಪ್ರವೇಶ ಪ್ರಾರಂಭವಾಗಿದ್ದು, ಮಾರ್ಚ್ 26 ರಂದು ಸಿಇಟಿ, ನೀಟ್ ತರಬೇತಿಗಳು ನಡೆಯಲಿವೆ. ಇದಕ್ಕಾಗಿ ಯಾವುದೇ ರೀತಿ ಶುಲ್ಕವಿರುವುದಿಲ್ಲ. ಎಲ್ಲ ವಿಷಯಗಳ ನೋಟ್ಸ್ ಮುದ್ರಣಕ್ಕಾಗಿ 1 ಸಾವಿರ ರೂ ವಿದ್ಯಾರ್ಥಿಗಳು ನೀಡಬೇಕಿದೆ ಎಂದರು.
ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ ಮಾತನಾಡಿ, ಸಿಇಟಿ, ನೀಟ್ ಗಾಗಿ ಲಕ್ಷಾಂತರ ರೂಪಾಯಿ ಶುಲ್ಕವನ್ನು ಭರಿಸಬೇಕಿದೆ. ಇದರ ಬಗ್ಗೆ ಬಡವರಿಗೆ ಅನುಕೂಲಕ್ಕಾಗಿ ಉಚಿತ ಶಿಬಿರ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಬಿವಿಪಿ ಹಿರಿಯ ಕಾರ್ಯಕರ್ತ ಅಶೋಕ ಶೆಂಬೆಳ್ಳೆ ಮಾತನಾಡಿ, ಬೀದರ ನಗರದ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಒಂದು ತಿಂಗಳು ಉಚಿತ ತರಬೇತಿ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ತರಬೇತಿ ನಡೆಸಲಗುತ್ತಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಇಲ್ಲಿಯವರೇ ನೂರಾರು ಜನ ತರಬೇತಿಯಿಂದ ಸಿಇಟಿ, ನೀಟ್ ಸೀಟುಗಳು ಪಡೆದಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೇ ಮಾತನಾಡಿ ಹೆಚ್ಚಿನ ಮಾಹಿತಿಗಾಗಿ 7624906563, 7411312269, 741134149 ಸಂಪರ್ಕಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪತ್ರಿಸ್ವಾಮಿ ಪಿಯು ಕಾಲೇಜಿನ ಆಡಳಿತಾಧಿಕಾರಿ ಅನೀಲಕುಮಾರ, ಪ್ರಾಂಶುಪಾಲ ಧೂಳಪ್ಪ ಮಳೆನೂರೆ, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಬಿರಾದರ, ಎನ್ ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಾಹಾದೇವ ಚಿಟಗೀರೆ, ನಾರಾಯಣ ರಾಠೋಡ, ಮಧುಕರ ಬೇಂದ್ರೆ, ಶಿವಾಜಿರಾವ ನಂಜವಡೆ, ಬಸವರಾಜ ಹಳ್ಳಿ, ಮಾಹಾದೇವ ಬಿಜಾಪುರ, ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ, ಕಾರ್ಯಕಾರಣಿ ಸದಸ್ಯೆ ಇಂದಿರವೇಣಿ, ಅಂಬಾದಾಸ ನಳಗೆ, ಅನಿಲ್ ಮೇತ್ರೆ, ಮಲ್ಲಿಕಾರ್ಜುನ್ ಟೇಕರಾಜ, ಅರ್ಜುನ್ ಬಂಗೆ, ಉಪಸ್ಥಿತರಿದ್ದರು.