ವಿದ್ಯಾರ್ಥಿ ಜೀವನ ಯಶಸ್ಸಿಗೆ ಗುರಿ ಮುಖ್ಯ

(ಸಂಜೆವಾಣಿ ವಾರ್ತೆ)
ಔರಾದ :ಜು.2: ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿ ಇರಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಶ್ರೀಕಾಂತ ಪಾಟೀಲ ಹೇಳಿದರು.
ಪಟ್ಟಣದ ಅಮರೇಶ್ವರ ಮಹಾ ವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಯುವ ಶಕ್ತಿ ಈ ದೇಶದ ಅವಿಭಾಜ್ಯ ಅಂಗ, ಈ ದೇಶಕ್ಕಾಗಿ, ಮಣ್ಣಿಗಾಗಿ, ಮಾತೃಭೂಮಿಯ ರಕ್ಷಣೆಗೆ ನಾವು ಸದಾ ಸಿದ್ಧರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಆರ್.ಆರ್.ಕೆ ಸಮಿತಿಯ ಪ್ರ. ಕಾರ್ಯದರ್ಶಿ ಶರಣಬಸಪ್ಪ ದೇಶಮುಖ, ಪ್ರಾಂಶುಪಾಲ ಡಾ. ಜಯದೇವಿ ತೇಲಿ, ರೇವಣಯ್ಯ ಮಠ, ಯೋಜನಾಧಿಕಾರಿ ಉತ್ತಮ ದಂಡೆ, ಡಾ. ಗೌತಮ ಗಾಯಕವಾಡ, ಶ್ವೇತಾ ಅಲ್ಲೂರ ಸೇರಿದಂತೆ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.