ವಿದ್ಯಾರ್ಥಿ ಜೀವನದ ಯಶಸ್ಸಿಗೆ ಸಮಯಪ್ರಜ್ಞೆ ಅಗತ್ಯ

ಭಾಲ್ಕಿ:ಮಾ.9:ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಶಿಸ್ತು, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸ ಅಗತ್ಯವಾದುದು ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಂಕುಶ ಢೋಲೆ ಹೇಳಿದರು.
ಪಟ್ಟಣದ ಹೌಸಿಂಗ್‍ಬೋರ್ಡ್ ಕಾಲೋನಿಯಲ್ಲಿರುವ ಎಮ್.ಆರ್.ಎ.ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ 2022-23ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಮಕ್ಕಳು ದುಶ್ಚಟಗಳಿಂದ ದೂರ ಉಳಿದು, ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡಬೇಕು. ವಿದ್ಯಾರ್ಥಿಗಳು ಕಠೀಣ ಪರಿಶ್ರಮದೊಂದಿಗೆ ಸಾಗಿದರೆ ತಾವು ಇಟ್ಟುಕೊಂಡಿರುವ ಗುರಿ ತಲುಪಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ಅಡತಡೆಗಳು ಬಂದರೂ ನಿರಾಶೆ ಹೊಂದದೆ ಆಶಾ ಭಾವನೆಯಿಂದ ಮುನ್ನುಗ್ಗಿದರೆ ಎಲ್ಲವನ್ನು ಗೆಲ್ಲಲು ಸಾಧ್ಯ. ಎಮ್.ಆರ್.ಎ. ಪ.ಪೂ ಕಾಲೇಜು, ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಅಶೋಕ ರಾಜೋಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲವಾಡಿಯ ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಮುಖ್ಯಗುರು ಜೈರಾಜ ದಾಬಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕು ಎಂದು ಹೇಳಿದರು.
ನವಕೀರಣ ಪ್ರೌಢಶಾಲೆ ಮುಖ್ಯಗುರು ರಾಮರಾವ ತೋರಣೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಜೀವನದಲ್ಲಿ ಸಫಲರಾಗಬೇಕು ಎಂದು ಸಲಹೆ ನೀಡಿದರು.
ಭಾಟಸಾಂಗವಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಬಬನ ಬಿರಾದಾರ ಮಾತನಾಡಿ, ಹೆತ್ತ ತಂದೆ-ತಾಯಿ, ಪಾಠ ಕಲಿಸುವ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಾದ ವಿಶಾಲ,ಅಂಬ್ರೀಶ,ಅಭಯ,ನಾಗೇಶ ಮತ್ತು ಕು.ಗಂಡಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸನ್ಮಾನ:ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ,ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದೇಶ್ವರದ ಸಿದ್ದಲಿಂಗೇಶ್ವರ ಪ್ರೌಢಶಾಲೆ ಮುಖ್ಯಗುರು ಸುರೇಶ ಪ್ರಭಾ, ಎಸ್.ಎಲ್.ಢೇರೆ, ಕೆ.ಬಿ.ಕೊಲೆ, ಕೆ.ಡಿ.ಸೋನಕಾಂಬಳೆ, ರಾಮ ರಾಠೋಡ, ಅಶೋಕ ಧಬಾಲೆ, ಶಿವರಾಜ ಗಾಯಕವಾಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು.ಸಪ್ನಾ ಮತ್ತು ಕು.ನಾಗೀನಬಾಯಿ ಪ್ರಾರ್ಥನೆ ಗೀತೆ ನುಡಿದರು.ಪ್ರೊ.ಆರ್.ಪಿ.ಮೋರೆ ಸ್ವಾಗತಿಸಿದರು. ಪ್ರೊ.ಶಿವಲೀಲಾ ರವಿ ಮೆಹಕ್ರೆ ನಿರೂಪಿಸಿದರು. ಪ್ರೊ.ವಿಜಯಲಕ್ಷ್ಮೀ ಸ್ವಾಮಿ ವಂದಿಸಿದರು.