
ಕೆಆರ್ ಪುರ,ಮಾ.೬- ವಿದ್ಯಾರ್ಥಿಗಳು ಯಾವುದೇ ಅವಮಾನ ಹಾಗೂ ವೈಫಲ್ಯಗಳಿಗೆ ಎದೆಗುಂದದೆ ಮುನ್ನಡೆಯಬೇಕು ಎಂದು ಯುನಿಸ್ಕೋ ಐಓಸಿ ಪ್ಯಾರಿಸ್ ನ ಸಲಹೆಗಾರ ಡಾ.ಆರ್.ವೆಂಕಟೇಶನ್ ಕಿವಿ ಮಾತು ಹೇಳಿದರು.
ಕ್ಷೇತ್ರದ ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ೧೨ನೇ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ವಿದ್ಯಾರ್ಥಿ ಜೀವನದಲ್ಲಿ ಏಳುಬೀಳುಗಳು, ಸಣ್ಣಪುಟ್ಟ ವೈಫಲ್ಯಗಳು ಸಹಜವಾಗಿದ್ದು ಅವುಗಳನ್ನು ಮೆಟ್ಟಿನಿಂತು ಮುಂದೆ ಸಾಗಬೇಕು. ಯಾವುದೇ ರೀತಿಯಲ್ಲೂ ಹಿಂಜರಿಕೆಗೆ ಓಳಗಾಗದೆ ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಹಾಗೂ ಅವರ ಬದುಕಿನಲ್ಲಿ ಮೈಲಿಗಲ್ಲನ್ನ ಸಾಧಿಸಲು ವಿದ್ಯಾಸಂಸ್ಥೆಗಳ ಪಾತ್ರ ಮಹತ್ತರವಾದದ್ದು ಅವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಎರಡು ಕೈಗಳಲ್ಲಿ ಬಾಚಿಕೊಳ್ಳಬೇಕು, ಯಾವುದೇ ಸವಾಲುಗಳನ್ನು ಎದುರಿಸಲು ಸದಾ ಸಿದ್ದರಾಗಿರುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ವಿಲ್ಸನ್ ಲಾರೆನ್ಸ್, ಕಾಲೇಜಿನ ಅಧ್ಯಕ್ಷ ಡಿ.ಕೆ.ಮೋಹನ್,ಸಿಇಓ ನಿತೀನ್,ಪ್ರಾಂಶುಪಾಲರಾದ ಇಂದುಮತಿ ಇದ್ದರು.