ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯದ ಗುರಿಯನ್ನು ಹೊಂದಬೇಕು

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ನ.17 ವಿದ್ಯಾರ್ಥಿಗಳ ಜೀವನದಲ್ಲಿ ಮುಂದಿನ ಜೀವನದ ಗುರಿಯನ್ನು ಹೊಂದಬೇಕು ಎಂದು ಇಲ್ಲಿಯ ಕ್ರಿಸ್ತ ಶರಣ ವಿದ್ಯಾಪೀಠದ ಆಡಳಿತ ಅಧಿಕಾರಿ ಫಾದರ್ ಚಿನ್ನಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಹಳೆ ಊರಿನ ಕ್ರಿಸ್ತ ಶರಣ ವಿದ್ಯಾಪೀಠ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ದಿಣಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಮಂತ್ರಿ ನೆಹರು ಭಾವಚಿತ್ರಕ್ಕೆ ಪುಸ್ಪವನ್ನು ಅರ್ಪಿಸಿ ಬಳಿಕ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಮನುಷ್ಯನ ಜೀವನ ದೊಡ್ಡದು, ಅದು ಸಾಧನೆಯ ಗುರಿಯಲ್ಲಿ ಸಾರ್ಥಕವಾಗಬೇಕು. ಆ ಗುರಿಯನ್ನು ಎಂದಿಗೂ ಒಂದೇ ಬಾರಿಗೆ ತಲುಪಲು ಆಗುವುದಿಲ್ಲ. ವಿದ್ಯಾರ್ಥಿಗಳಿರುವಾಗಲೇ ಗುರಿಯನ್ನು ಸಾಧಿಸುವ ಛಲವನ್ನು ಹೊಂದಬೇಕು ಎಂದು ತಿಳಿಸಿದರು.
ಆಸಿಸ್ ಸಿಸ್ಟರ್‍ಗಳಾದ ದೀಪಾ ಮತ್ತು ಜೋಯಿಲ್ ಸೇರಿ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ನಾಯಕರು ವೇದಿಕೆಯನ್ನು ಅಲಂಕರಿಸಿದ್ದರು. ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎನ್.ಶೋಭಾ ದಯಾನಂದ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೈ.ಆರೋಗ್ಯಪ್ಪ, ದಹಿಕ ಶಿಕ್ಷಕ ಚಂದ್ರನಾಯ್ಕ್, ಶಿಕ್ಷಕಿಯರಾದ ಪುನಿತಾ ಮತ್ತು ಶಾರದ ಸೇರಿ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಂದ ಛದ್ಮವೇಶ ಪ್ರದರ್ಶನ ಜರುಗಿತು. ಬಳಿಕ ಪ್ರಾಥಮಿಕ ಮತ್ತು ಪ್ರೌಡಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿ ಎಚ್.ಪ್ರಜ್ವಲ್, ಶಿಕ್ಷಕಿಯರಾದ ಉಮಾಮಹೇಶ್ವರಿ ಹಾಗೂ ವಿದ್ಯಾ ನಿರೂಪಿಸಿದರು.