ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವ

ಗುಳೇದಗುಡ್ಡ ಜು.26- ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ದೈನಂದಿನ ಭವಿಷ್ಯದ ಜೀವನ ರೂಪಿಸುವಲ್ಲಿ ಪಠ್ಯೇತರ ಚಟುವಟಿಕೆಗಳು ಸಹಾಯಕವಾಗಿವೆ ಎಂದು ಪಟ್ಟಣದ ಖ್ಯಾತ ವಕೀಲರಾದ ಅರುಣ ಉದ್ನೂರ ಹೇಳಿದರು.
ಪಟ್ಟಣದ ಪಿಇಟಿಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಮೋಟಾರು ವಾಹನ ಕಾಯ್ದೆಗಳ ಅರಿವು ವಿದ್ರ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದ್ದು ಪಾಲಕರು ಹಾಗೂ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ವಾಹನ ಚಲಾಯಿಸಬೇಕೆಂದು ತಿಳುವಳಿಕೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ವಿವಿಧ ಶೈಕ್ಷಣಿಕ ಘಟಕಗಳನ್ನು ನಿರ್ಮಿಸಿ ಅವುಗಳ ಪರಿಚಯ ಮಾಡಿಕೊಟ್ಟರು.
ಪ್ರಧಾನ ಮಂತ್ರಿಯಾಗಿ ಕುಮಾರಿ ರೇನಿಷಾ ಬೆಟಗೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಕು.ಅಮೃತಾ ಹಿರೇಮಠ ಮತ್ತು ಕು. ಆದರ್ಶ ಪಾಟೀಲ, ಕ್ರೀಡಾಮಂತ್ರಿಯಾಗಿ ಕು. ಕಾವ್ಯ ಅಂಬೀಗೇರ, ಹಣಕಾಸುಮಂತ್ರಿ ಕು. ಪ್ರಜ್ವಲ್ ಕುದುರಿ, ಸಾಂಸ್ಕøತಿಕ ಮಂತ್ರಿ ಕು. ಸಂಜನಾ ವಡವಡಗಿ, ಶಿಸ್ತುಮಂತ್ರಿ ಕು. ಆಕಾಶ ಮಾನ್ವಿ, ಪ್ರವಾಸ ಮಂತ್ರಿ ಮಲ್ಲನಗೌಡ ಗೌಡರ ಶಿಕ್ಷಣ ಮಂತ್ರಿ ಕು. ಕಿರಣ ದೊಡಮನಿ ಆಯ್ಕೆಯಾದರು. ಇವರಿಗೆ ಮುಖ್ಯಗುರುಮಾತೆ ಜೆ.ಜೆ. ಲೋಬೋ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಆಂಗ್ಲಮಾಧ್ಯಮ ಶಾಲೆಯ ಚೇರ್ಮನ್ ಅಶೋಕ ಹೆಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್.ಆರ್. ರಾಠಿ, ಎ.ಡಿ.ಕೊಪ್ಪಳ, ಶ್ಯಾಮಸುಂದರ ಪಾಲಪಾಣಿ, ಹೆಚ್.ವಿ.ಹೊಕ್ರಾಣಿ, ಶಬಾನಾ ಮಕಾಂದಾರ, ವೀಣಾ ಹಳ್ಳೂರ, ಸಂಗೀತಾ ಪರ್ವತೀಕರ ಮತ್ತಿತರರಿದ್ದರು.