ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು, ಎ.೧- 20 ವರ್ಷದ ವಿದ್ಯಾರ್ಥಿಯೋರ್ವ ಪಾಂಡೇಶ್ವರದಲ್ಲಿರುವ ತನ್ನ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ.

ಮೃತನನ್ನು ಕಡಬ ಮೂಲದ ರೀನು ವರ್ಗೀಸ್ ಎಂದು ಗುರುತಿಸಲಾಗಿದೆ. ರೀನು ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಜನೆ ಮಾಡುತ್ತಿದ್ದ. ಪಾಂಡೇಶ್ವರದಲ್ಲಿ ಒಂದು ರೂಮ್‌ನಲ್ಲಿ ತಂಗಿದ್ದ. ರೀನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ಈವರೆಗೂ ತಿಳಿದು ಬಂದಿಲ್ಲ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.